ಮೂಡುಬಿದಿರೆ: ಪೇಟೆಯ ಮುಖ್ಯರಸ್ತೆ ಬಳಿಯ ನಿವಾಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೂಡುಬಿದಿರೆ ನಿವಾಸಿ ರಾಘು ಪೈ(32) ಆತ್ಮಹತ್ಯೆ ಮಾಡಿಕೊಂಡ ಯುವಕ. ಹಲವು ವರ್ಷದಿಂದ ಆಟೋ ಚಾಲಕನಾಗಿದ್ದ ಈತ ಕೆಲವು ತಿಂಗಳಿಂದ ಆಟೋ ರಿಕ್ಷಾ ಮಾರಿ, ಇತರ ವಾಹನಗಳಲ್ಲಿ ಚಾಲಕನಾಗಿ ದುಡಿಯುತ್ತಿದ್ದ.
ಭಾನುವಾರ ರಾತ್ರಿ ಈತ ಮನೆಗೆ ಬಾರದಿರುವುದಕ್ಕೆ ತಾಯಿ ಆತಂಕದಲ್ಲಿರುವಾಗಲೇ ಇಂದು ಬೆಳಿಗ್ಗೆ ಮನೆ ಸಮೀಪವಿದ್ದ ಬಾವಿ ಬಳಿ ತಾಯಿಯ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
Kshetra Samachara
12/10/2020 12:29 pm