ಮಂಗಳೂರು: ಹಣಕಾಸಿನ ವಿಚಾರಕ್ಕೆ ಓರ್ವನ ಮೇಲೆ ಹಲ್ಲೆ ನಡೆಸಿದ ನಾಲ್ವರನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.
ನಗರದ ಚಿಲಿಂಬಿಯಲ್ಲಿ ಬುಧವಾರ ಸಂಜೆ ಘಟನೆ ನಡೆದಿದ್ದು, ಚಿಲಿಂಬಿಯ ಕೋರಿ ರಕ್ಷಿತ್ (35) ಹಲ್ಲೆಗೆ ಒಳಗಾದ ವ್ಯಕ್ತಿ. ಹೊಸಬೆಟ್ಟು ನಿವಾಸಿ ಚಂದು ಯಾನೆ ಚಂದ್ರಹಾಸ ಶೆಟ್ಟಿ (40), ಕೊಟ್ಟಾರ ಚೌಕಿ ನಿವಾಸಿಗಳಾದ ಕಮಲಾಕ್ಷ (42), ಡೆನ್ನಿಸ್ (26) ಹಾಗೂ ವಿಶ್ವಾಸ್ (26) ಹಲ್ಲೆಗೈದ ಆರೋಪಿಗಳು.
ಈ ಮೊದಲು ಕೋರಿ ರಕ್ಷಿತ್ ಮತ್ತು ಆರೋಪಿಗಳು ಸ್ನೇಹಿತರಾಗಿದ್ದರು. ಆದರೆ ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಉಂಟಾಗಿ ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಕೋಪಗೊಂಡ ನಾಲ್ವರು ಸೇರಿ ರಕ್ಷಿತ್‌ನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Kshetra Samachara
09/10/2020 12:27 pm