ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕೊರೊನಾಗೆ ಔಷಧ ನೀಡುವ ನೆಪದಲ್ಲಿ ಮೆಡಿಕಲ್ ನಿಂದ ವಂಚನೆ; ದೂರು

ಮಂಗಳೂರು: ಕೊರೊನಾಗೆ ಸೂಕ್ತ ಔಷಧ ಕಂಡು ಹಿಡಿದಿಲ್ಲ ವಾದರೂ ನಗರದ ಮೆಡಿಕಲ್ ವೊಂದರಲ್ಲಿ ಕೊರೊನಾಕ್ಕೆ ಔಷಧ ನೀಡುವ ನೆಪದಲ್ಲಿ ಸಾರ್ವಜನಿಕರನ್ನು ವಂಚಿಸಲಾಗುತ್ತಿದೆ ಎಂದು ವಿಚಾರವಾದಿಗಳ ಸಂಘದ ರಾಷ್ಟ್ರೀಯ ಅಧ್ಯಕ್ಷ ನರೇಂದ್ರ ನಾಯಕ್ ಮಂಗಳೂರು ಉಪವಿಭಾಗ ಸಹಾಯಕ ಆಯುಕ್ತರು ಹಾಗೂ ಆಯುಷ್ಮಾನ್ ಇಲಾಖೆ ಅಧಿಕಾರಿಗೆ ದೂರು ನೀಡಿದ್ದಾರೆ.

ಕ್ಲಾಕ್ ಟವರ್ ಬಳಿಯ ‘ಆಯುರ್ ವಿವೇಕ್’ ಎಂಬ ಮೆಡಿಕಲ್ ಶಾಪ್ ನಲ್ಲಿ‌ ಗಿರಿಧರ ಕಜೆ ಅವರ ‘ಸಮತ್ವ’ ಕೊರೊನಾ ಗುಣಪಡಿಸುವ ಮಾತ್ರೆ ಲಭ್ಯವಿದೆ ಎಂಬ ಜಾಹೀರಾತೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸ ಬೇಕೆಂದು ಅವರು ದೂರಿನಲ್ಲಿ‌ ಆಗ್ರಹಿಸಿದ್ದಾರೆ.

240 ರೂ.ಗೆ 60 ಮಾತ್ರೆಗಳು ಎಂದು ಹೇಳಿಕೊಂಡಿರುವ ಮೆಡಿಕಲ್, ಕೊರೊನಾ ಸೋಂಕಿತರು ದಿನಕ್ಕೆ 2 ಮಾತ್ರೆಗಳಂತೆ 10 ದಿನಗಳ ಕಾಲ ಸೇವಿಸಬೇಕು ಎಂದು ಜಾಹೀರಾತಿನಲ್ಲಿ ಉಲ್ಲೇಖಿಸಲಾಗಿದೆ.

ಕೊರೊನಾಕ್ಕೆ ಇನ್ನೂ ಔಷಧ ಕಂಡು ಹಿಡಿದಿಲ್ಲ. ಆದಾಗ್ಯೂ ಮಂಗಳೂರಿನ ಈ ಮೆಡಿಕಲ್ ನಲ್ಲಿ ಕೊರೊನಾ ರೋಗ ನಿವಾರಕ ಮಾತ್ರೆ ಲಭ್ಯವಿದೆ ಎಂದು ಜಾಹೀರಾತು ನೀಡಿ ಜನರ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿರುವ ನರೇಂದ್ರ ನಾಯಕ್, ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

08/10/2020 07:31 am

Cinque Terre

16.41 K

Cinque Terre

0

ಸಂಬಂಧಿತ ಸುದ್ದಿ