ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಕರಾವಳಿಯಾದ್ಯಂತ 'ರಾಜ್ ಸೌಂಡ್ಸ್ & ಲೈಟ್ಸ್' ಯಶಸ್ವಿ ಪ್ರದರ್ಶನ; ವಿದೇಶಗಳಲ್ಲೂ ಸಿನಿಮಾಗೆ ಭಾರೀ ಮೆಚ್ಚುಗೆ

ತುಳು ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ 'ರಾಜ್ ಸೌಂಡ್ಸ್ & ಲೈಟ್ಸ್' ತುಳು ಸಿನಿಮಾ, ವಿಶ್ವ ತುಳು ಸಿನಿಮಾ ಪ್ರೀಮಿಯರ್ ಶೋನಲ್ಲಿ ಬಹಳ ಮೆಚ್ಚುಗೆಗೆ ಪಾತ್ರವಾಗಿತ್ತು. ಇದರ ಬೆನ್ನಲ್ಲೇ ಕರಾವಳಿ ಜಿಲ್ಲೆಯಾದ್ಯಂತ ಈ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 'ಒಂದು ಮೊಟ್ಟೆಯ ಕಥೆ' ಚಿತ್ರ ತಂಡದ ನೇತೃತ್ವದಲ್ಲಿ, ವೈಭವ್ ಫಿಕ್ಸ್ ಅಡಿಯಲ್ಲಿ ಮ್ಯಾಂಗೋ ಪಿಕಲ್ ಬ್ಯಾನರ್ ನಲ್ಲಿ ತಯಾರಾದ ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ತುಳು ಸಿನಿಮಾ ಬಿಡುಗಡೆಗೊಂಡ ಎಲ್ಲಾ ಟಾಕೀಸ್, ಮಾಲ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಮೇ 27 ರಂದು ಶುಕ್ರವಾರ ಪುತ್ತೂರಿನ ಅರುಣಾ ಚಿತ್ರಮಂದಿರದಲ್ಲಿ ಬೆಳಿಗ್ಗೆ 9 ಗಂಟೆಗೆ ಸಿನಿಮಾ ಬಿಡುಗಡೆಯ ಕಾರ್ಯಕ್ರಮ ನಡೆಯಲಿದೆ ಎಂದು ಸಿನಿಮಾದ ನಾಯಕ ನಟ ವಿನೀತ್ ಕುಮಾರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶುಕ್ರವಾರದಂದು 9 ಗಂಟೆಗೆ ಪುತ್ತೂರಿನಲ್ಲಿ ಸಿನಿಮಾ ಪ್ರಚಾರದ ಜಾಥಾ, ರೋಡ್ ಶೋ ನಡೆಯಲಿದೆ. ಇದರಲ್ಲಿ ರಾಜ್ ಸೌಂಡ್ಸ್ & ಲೈಟ್ಸ್ ಸಿನಿಮಾದಲ್ಲಿ ಅಭಿನಯಿಸಿದ ಕಲಾವಿದರು ಭಾಗವಹಿಸಲಿದ್ದಾರೆ. 11 ಹೊರ ದೇಶಗಳಲ್ಲಿ ಮತ್ತು ದೇಶದ 6 ಕಡೆಗಳಲ್ಲಿ ಈ ಸಿನಿಮಾದ ಪ್ರೀಮಿಯರ್ ಶೋ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ ಎಂದರು.

ಹಾಗೇ ವಿದೇಶದಲ್ಲಿರುವ ತುಳುವರು ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ತುಳುವಿನಲ್ಲಿ ತಯಾರಾದ ದೊಡ್ಡ ಬಜೆಟ್ ನ ಸಿನಿಮಾ ಆಗಿದೆ. ಈ ಸಿನಿಮಾಕ್ಕಾಗಿ ಒಂದೂವರೆ ಕೋಟಿ ರೂಪಾಯಿಗೂ ಹೆಚ್ಚು ಖರ್ಚಾಗಿದೆ ಎಂದರು.

Edited By :
Kshetra Samachara

Kshetra Samachara

25/05/2022 12:59 pm

Cinque Terre

5.25 K

Cinque Terre

1

ಸಂಬಂಧಿತ ಸುದ್ದಿ