ಕೊಲೆ ಯತ್ನ ಪ್ರಕರಣ : ಇಬ್ಬರು ಆರೋಪಿಗಳ ಬಂಧನ

ಬಂಟ್ವಾಳ: ಪುದು ಗ್ರಾಮದ ಕಲ್ಲತಡಮೆ ಎಂಬಲ್ಲಿ ಕಾರೊಂದನ್ನು ಜಖಂಗೊಳಿಸಿ, ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಿದ ಆರೋಪದಲ್ಲಿ ಇಬ್ಬರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಕುಂಪನಮಜಲು ನಿವಾಸಿ ಮೊಹಮ್ಮದ್ ಹಿದಾಯತ್ (25) ಮತ್ತು ಮೊಹಮ್ಮದ್ ಅಶ್ರಫ್ (27) ಎಂಬಿಬ್ಬರು ಆರೋಪಿಗಳಾಗಿದ್ದು, ಇನ್ನುಳಿದ ಆರೋಪಿಗಳ ಪತ್ತೆಯ ಬಗ್ಗೆ ವಿಶೇಷ ತಂಡ ರಚಿಸಲಾಗಿದ್ದು, ತನಿಖೆ ಮುಂದುವರಿದಿದೆ.

ಆರೋಪಿಗಳ ಪತ್ತೆಯ ಬಗ್ಗೆ ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ವ್ಯಾಲೆಂಟೈನ್ ಡಿಸೋಜ ನಿರ್ದೇಶನದಲ್ಲಿ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕರಾದ ಟಿ.ಡಿ. ನಾಗರಾಜ್ ಮಾರ್ಗದರ್ಶನದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲಿಸ್ ಠಾಣಾ ಅಪರಾಧ ವಿಭಾಗದ ಪಿ.ಎಸ್.ಐ. ಸಂಜೀವ ಹಾಗೂ ಸಿಬ್ಬಂದಿಗಳ ವಿಶೇಷ ತಂಡ ರಚಿಸಲಾಗಿತ್ತು.

Kshetra Samachara

Kshetra Samachara

11 days ago

Cinque Terre

2.91 K

Cinque Terre

0