ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಕ್ಷಿತ್ ಶೆಟ್ಟಿ 'ಚಾರ್ಲಿ 777 ಸಿನಿಮಾ'ದಿಂದ ಸ್ಪೂರ್ತಿ ಮಂಗಳೂರು ಪೊಲೀಸ್ ಶ್ವಾನದಳದ ನಾಯಿಗೆ 'ಚಾರ್ಲಿ' ನಾಮಕರಣ

ರಕ್ಷಿತ್ ಶೆಟ್ಟಿ ಹೊಸ ಸಿನಿಮಾ 'ಚಾರ್ಲಿ 777' ನಿನ್ನೆ ಪ್ರೀಮಿಯರ್ ಶೋ ನಡೆದಿತ್ತು. ಇದೀಗ ಈ ಸಿನಿಮಾದಿಂದ ಸ್ಪೂರ್ತಿ ಪಡೆದು ಮಂಗಳೂರು ಪೊಲೀಸ್ ಶ್ವಾನದಳದ ನಾಯಿಗೆ ನಾಮಕರಣ ಮಾಡಲಾಗಿದೆ.

ನಿನ್ನೆ ಮಂಗಳೂರು ಪೊಲೀಸರು 'ಚಾರ್ಲಿ 777' ಸಿನಿಮಾ ಪ್ರೀಮಿಯರ್ ಶೋ ವೀಕ್ಷಣೆ ಮಾಡಿದ್ದಾರೆ. ಈ ಸಿನಿಮಾದಲ್ಲಿಯೂ ಲ್ಯಾಬ್ರೊಡರ್ ರಿಟ್ರಿವರ್ ತಳಿಯ ನಾಯಿಯೂ ಪಾತ್ರ ವಹಿಸಿದೆ. ಈ ಮೂಲಕ ಮನುಷ್ಯ ಹಾಗೂ ಶ್ವಾನದ ನಡುವಿನ ಸಂಬಂಧವನ್ನು ಸೊಗಸಾಗಿ ಚಿತ್ರಿಸಲಾಗಿದೆ. ಇದೇ ಸ್ಪೂರ್ತಿಯಿಂದ ಮಂಗಳೂರು ಪೊಲೀಸ್ ಇಲಾಖೆ ಇಂದು ಈ ನಾಯಿಮರಿಗೆ ಚಾರ್ಲಿ ಎಂದು ನಾಮಕರಣ ಮಾಡಲಾಗಿದೆ.

3 ತಿಂಗಳ ಈ ಲ್ಯಾಬ್ರೊಡರ್ ರಿಟ್ರಿವರ್ ಶ್ವಾನವನ್ನು ಬಂಟ್ವಾಳದಿಂದ ಖರೀದಿಸಲಾಗಿದೆ. 2022 ಮಾರ್ಚ್ 16ಗೆ ಹುಟ್ಟಿದ ಈ ಶ್ವಾನವನ್ನು ಪೊಲೀಸ್ ಇಲಾಖೆಗಾಗಿ 20,000 ರೂ. ನೀಡಿ ಖರೀದಿಸಲಾಗಿದೆ. ಮುಂದೆ 3-4 ತಿಂಗಳ ಬಳಿಕ ಬೆಂಗಳೂರು ಸೌತ್ ಸಿಆರ್ ನಲ್ಲಿ ಆರು ತಿಂಗಳ ಕಾಲ ಈ ಶ್ವಾನಕ್ಕೆ ತರಬೇತಿ ನೀಡಲಾಗುತ್ತದೆ. ಬಳಿಕ ಈ ಶ್ವಾನವು ಬಾಂಬ್ ನಿಷ್ಕ್ರಿಯ ಹಾಗೂ ಪತ್ತೆ ಮಾಡಲು ಪೊಲೀಸ್ ಇಲಾಖೆಗೆ ಸೇರ್ಪಡೆಯಾಗುತ್ತದೆ.

Edited By :
PublicNext

PublicNext

10/06/2022 04:15 pm

Cinque Terre

30.5 K

Cinque Terre

3

ಸಂಬಂಧಿತ ಸುದ್ದಿ