ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪದ್ದೈ ಬಂಗಾರ್ ಕಿರುಚಿತ್ರಕ್ಕೆ ಮುಹೂರ್ತ

ಬಂಟ್ವಾಳ: ಸುವರ್ಣ ಕ್ರಿಯೇಶನ್ಸ್ ಬಿ.ಸಿ.ರೋಡ್ ನಿರ್ಮಾಣದ ಪದ್ದೈ ಬಂಗಾರ್ ತುಳು ಕಿರುಚಿತ್ರದ ಮುಹೂರ್ತ ಕಾರ್ಯಕ್ರಮ ಶ್ರೀ ಕ್ಷೇತ್ರ ಪನೋಲಿಬೈಲ್ ನಲ್ಲಿ ಗುರುವಾರ ನಡೆಯಿತು. ಕಾರಣಿಕ ದೈವ ಶ್ರೀ ಕಲ್ಲುರ್ಟಿ ಸಾನ್ನಿಧ್ಯದಲ್ಲಿ ಪ್ರಾರ್ಥನೆ ಸಲ್ಲಿಸಿ ಮುಹೂರ್ತ ನೆರವೇರಿಸಲಾಯಿತು.

ಈ ಸಂದರ್ಭ ಕಿರುಚಿತ್ರದ ಪ್ರಥಮ ಪೋಸ್ಟರ್ ಅನ್ನು ಚಲನಚಿತ್ರ ಯುವ ನಿರ್ದೇಶಕ, ನಾಟಕಕಾರ ಜೆ.ಪಿ. ತೂಮಿನಾಡ್ ಅವರು ಬಿಡುಗಡೆಗೊಳಿಸಿ ಶುಭಹಾರೈಸಿದರು. ಚಲನಚಿತ್ರ, ರಂಗಭೂಮಿ ನಟ ಪ್ರಕಾಶ್ ತೂಮಿನಾಡು, ಶಮಿಲ್ ಬಂಗೇರ, ನಿಮಾ೯ಪಕರಾದ ಲಕ್ಷೀಶ್ ಕುಲಾಲ್ ಪನೋಲಿಬೈಲ್, ಜಯರಾಜ್ ಅತ್ತಾಜೆ, ನಿರ್ದೇಶಕ ರಚನ್ ಆಲಾಡಿ, ಛಾಯಾಗ್ರಾಹಕ ತ್ರಿಶಾಲ್ ಶೆಟ್ಟಿ ಪೂಂಜ, ಕಲಾವಿದರಾದ ರತ್ನದೇವ್ ಪುಂಜಾಲಕಟ್ಟೆ, ಉಮೇಶ್ ಮಜಲೋಡಿ, ಯಶೊದರ್ ನೆಲ್ಲಿಗುಡ್ಡೆ, ವಿನೋದ್ ರಾಜ್ , ವೆಂಕಟೇಶ್ ಕಕ್ಯಪದವು, ಶಿವರಾಜ್ , ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.ಲಕ್ಷ್ಮೀಶ ಕುಲಾಲ್, ಜಯರಾಜ ಅತ್ತಾಜೆ ನಿರ್ಮಾಣದ, ಯುವ ಕಲಾವಿದ ರಚನ್ ಆಲಾಡಿ ನಿರ್ದೇಶನ ದಲ್ಲಿ ಪದ್ದೈ ಬಂಗಾರ್ ತುಳು ಕಿರುಚಿತ್ರ ಶೀಘ್ರ ವೀಕ್ಷಣೆಗೆ ಲಭ್ಯವಾಗಲಿದೆ.

Edited By : Vijay Kumar
Kshetra Samachara

Kshetra Samachara

22/10/2020 11:38 pm

Cinque Terre

5.2 K

Cinque Terre

2