ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರಿನಲ್ಲಿ ಮರು ಪ್ರದರ್ಶನ ನೀಡಲು ಮಲ್ಟಿಪ್ಲೆಕ್ಸ್ ಗಳು ರೆಡಿ

ಮಂಗಳೂರು: ಡೆಡ್ಲಿ ಸೋಂಕು ಕೊರೊನಾ ದಿಂದಾಗಿ ಸಿನಿಮಾ ಹಾಲ್ ಗಳು ಬಂದ್ ಆಗಿದ್ದವು ಸಧ್ಯ ಮತ್ತೆ ಮರು ಆರಂಭಕ್ಕೆ ಸರ್ಕಾರ ಅನುಮತಿ ಕೊಟ್ಟಿದೆ.

ನಗರದ ಭಾರತ್ ಮಾಲ್ ನ ಬಿಗ್ ಸಿನೆಮಾಸ್ ಹಾಗೂ ನಗರದ ಸಿಟಿ ಸೆಂಟರ್ ಮಾಲ್ ನ ಸಿನಿಪಾಲಿಸಿ ಮಲ್ಟಿಪ್ಲೆಕ್ಸ್ ಥಿಯೇಟರ್ಗಳು ಅಕ್ಟೋಬರ್ 15 ಇಂದಿನಿಂದ ಆರಂಭವಾಗಿವೆ.

ಆದರೆ ಫಾರಂ ಫಿಝಾ ಮಾಲ್ ನಲ್ಲಿರುವ ಪಿವಿಆರ್ ಚಿತ್ರ ಮಂದಿರ ಕೆಲವು ದಿನಗಳ ಬಳಿಕ ತೆರೆಯಲಿದೆ.

ಮಣಿಪಾಲ ಐನಾಕ್ಸ್ ಚಿತ್ರ ಮಂದಿರ ಯಾವುದೇ ಅಧಿಕೃತ ಘೋಷನೆ ಮಾಡಿಲ್ಲ.

ಪ್ರೇಕ್ಷಕರನ್ನು ಮತ್ತೆ ಮನರಂಜಿಸಲು ಸಿದ್ದವಾಗಿರುವ ಮಲ್ಟಿಪ್ಲೆಕ್ಸ್ ಗಳು ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದು ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿದೆ.

ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವತ್ತ ಗಮನ ಹರಿಸಿ ಆಸನಗಳನ್ನು ಮರುಜೋಡನೆ ಮಾಡಲಾಗಿದೆ.

ಆನ್ ಲೈನ್ ಬುಕ್ಕಿಂಗ್ ಆರಂಭವಾಗಿದೆ.

ನಗರ ಚಿತ್ರಮಂದಿರಗಳಾದ ಜ್ಯೋತಿ, ರಾಮಕಾಂತಿ, ರೂಪಾವಾಣಿ, ಸುಚಿತ್ರಾ, ಪ್ರಭಾತ್, ಸುರತ್ಕಲ್ ನ ನಟರಾಜ್ ಥಿಯೇಟರ್, ಮೂಡಬಿದಿರೆಯ ಅಮರಶ್ರೀ, ಪುತ್ತೂರಿನ ಅರುಣಾ, ಸುಳ್ಯದ ಸಂತೋಷ್, ಬೆಳ್ತಂಗಡಿಯ ಭಾರತ್, ಉಡುಪಿ ಜಿಲ್ಲೆಯಲ್ಲಿನ ಅಲಂಕಾರ್, ಅಲಂಕರ್, ಆಶಿರ್ವಾದ್, ಪ್ಲಾನೆಟ್ ಸಿನಿಮಾ ಮಂದಿರದಲ್ಲಿ ಸಿನಿಮಾಗಳ ಪ್ರದರ್ಶನಕ್ಕೆ ಸಿದ್ದತೆ ನಡೆಸಿದ್ದಾರೆ.

ಆದರೆ ಅಧಿಕೃತ ದಿನಾಂಕವನ್ನು ಘೋಷಿಸಿಲ್ಲ.

Edited By : Nirmala Aralikatti
Kshetra Samachara

Kshetra Samachara

15/10/2020 03:42 pm

Cinque Terre

5.04 K

Cinque Terre

0

ಸಂಬಂಧಿತ ಸುದ್ದಿ