ನಿಡ್ಡೋಡಿ: ಮುಚ್ಚೂರು ಕಾನದ ಶ್ರೀ ರಾಮ ಯುವಕ ಸಂಘ ( ರಿ) ನ ಸುವರ್ಣ ಮಹೋತ್ಸವದ ಪ್ರಯುಕ್ತ ಕ್ಯಾಡ್ ಫೌಂಡೇಶನ್ ಮತ್ತು ದಾನಿಗಳ ನೆರವಿನಿಂದ ಸಾರ್ವಜನಿಕ ಸೇವೆಗಾಗಿ ಅಂಬ್ಯುಲೆನ್ಸ್ ಲೋಕಾರ್ಪಣೆ ಹಾಗೂ ಜವಾಬ್ದಾರಿ ಹಸ್ತಾಂತರ* ಕಾರ್ಯಕ್ರಮ ಭಾನುವಾರ ಜರುಗಿತು.
ಕಾರ್ಯಕ್ರಮದಲ್ಲಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಡಾ.ಭರತ್ ಶೆಟ್ಟಿ, ಮಾಜಿ ಸಚಿವ ಕೃಷ್ಣ ಪಾಲೇಮಾರ್, ಕಟೀಲಿನ ಅನಂತ ಪದ್ಮನಾಭ ಅಸ್ರಣ್ಣ, ಶ್ರೀರಾಮ ಯುವಕ ಸಂಘದ ಸಂಚಾಲಕ ಜನಾರ್ಧನ ಗೌಡ ಸಹಿತ ಗಣ್ಯರು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
23/01/2022 04:01 pm