ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅತಿಕಾರಿಬೆಟ್ಟು: ಕೋವಿಡ್ ದಿನಗಳಲ್ಲಿ ವಾರಿಯರ್ಸ್ ಕಾರ್ಯ ಶ್ಲಾಘನೀಯ: ಭೋಜರಾಜ್

ಮುಲ್ಕಿ: ಮುಲ್ಕಿ ಸಮೀಪದ ಅತಿಕಾರಿಬೆಟ್ಟು ದೆಪ್ಪುಣಿಗುತ್ತು ವಿನಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಳೆದ ಕೊರೊನಾ ವಾರಿಯರ್ಸ್ ಕಿಲ್ಪಾಡಿ ಪ್ರಸಾದ್ ಪೂಜಾರಿ (ಪೇಚು) ರವರನ್ನು ಖ್ಯಾತ ಚಲನಚಿತ್ರ ನಟ ನವರಸ ನಾಯಕ ಬೋಜರಾಜ್ ವಾಮಂಜೂರು ಹಾಗೂ ಆತ್ಮೀಯ ಮಿತ್ರರ ಸಮ್ಮಖದಲ್ಲಿ ಗೌರವಿಸಲಾಯಿತು.

ಈ ಸಂದರ್ಭ ಚಲನಚಿತ್ರನಟ ಭೋಜರಾಜ ವಾಮಂಜೂರು ಮಾತನಾಡಿ "ಕೋವಿಡ್ ದಿನಗಳಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸೋಂಕಿತರ ಜೀವ ಉಳಿಸಲು ಕೊರೋನಾ ವಾರಿಯರ್ಸ್ ಕೆಲಸ ಮಾಡಿದ ಪ್ರಸಾದ್ ಪೂಜಾರಿ ಮಾಡಿದ ಕಾರ್ಯ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡುವ ಮೂಲಕ ಜನಮನ್ನಣೆ ಗಳಿಸಲಿ "ಎಂದರು ಶುಭ ಹಾರೈಸಿದರು.

ಈ ಸಂದರ್ಭ ಅತಿಕಾರಿಬೆಟ್ಟು ಗ್ರಾಪಂ ಸದಸ್ಯರಾದ ದಯಾನಂದ ಮಟ್ಟು ಮಾಜೀ ಉಪಾಧ್ಯಕ್ಷ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು ಮೂಲ್ಕಿ ರಿಕ್ಷಾಯೂನಿಯನ್ ನ ಅಧ್ಯಕ್ಷ ಸಂತೋಷ ಶೆಟ್ಟಿ, ಸುಬ್ರಹ್ಮಣ್ಯ ಶೆಣೈ, ನಾಗರಾಜ್ ಶೆಣೈ, ಕಿಶೋರ್ ಕವತ್ತಾರು,ಶೈಲೇಶ್ ಚಿತ್ರಾಪು ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

16/08/2021 02:45 pm

Cinque Terre

3.16 K

Cinque Terre

0