ಮುಲ್ಕಿ:ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ (ರಿ) ಮೂಲ್ಕಿ ವಲಯ ಸಮಿತಿಯ ಆಶ್ರಯದಲ್ಲಿ ಕರ್ನಾಟಕ ಸರಕಾರದ ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಭದ್ರತಾ ಮಂಡಳಿ ವತಿಯಿಂದ ಹೊಲಿಗೆ ವ್ರತ್ತಿ ಭಾಂದವರಿಗೆ ನೀಡಲ್ಪಡುವ ಆಹಾರ ಧಾನ್ಯಗಳ ಕಿಟ್ ವಿತರಣೆ ಕಾರ್ಯಕ್ರಮ ಕಾರ್ನಾಡ್ ನಲ್ಲಿ ನಡೆಯಿತು.
ಫಲಾನುಭವಿಗಳಿಗೆ ಕಿಟ್ ವಿತರಿಸಿ ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುಭಾಷ್ ಶೆಟ್ಟಿ ಮಾತನಾಡಿ ಕೊರೊನಾ ಸಂಕಷ್ಟದ ದಿನಗಳಲ್ಲಿ ಸರಕಾರ ಅಸಂಘಟಿತ ಕಾರ್ಮಿಕರಿಗೆ ಸಹಾಯ ಹಸ್ತ ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಅಸಂಘಟಿತ ಕಾರ್ಮಿಕರ ಸಮಸ್ಯೆಗಳ ನಿವಾರಣೆಗೆ ಪ್ರಯತ್ನಿಸಲಾಗುವುದು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಮುಲ್ಕಿ ಕೆ ಎಸ್ ಟಿ ಎ ವಲಯದ ಅಧ್ಯಕ್ಷ ಕಿಶೋರ್ ಕುಮಾರ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮುಲ್ಕಿ ನ. ಪಂ. ಉಪಾಧ್ಯಕ್ಷರಾದ ಸತೀಶ್ ಅಂಚನ್, ಕೆ ಎಸ್ ಟಿ ಎ ದ. ಕ ಜಿಲ್ಲಾ ಸಮಿತಿಯ ಕೋಶಾಧಿಕಾರಿ ಉದಯ ಅಮೀನ್ ಮಟ್ಟು, ಕ್ಷೇತ್ರ ಅಧ್ಯಕ್ಷ ವಿಶ್ವನಾಥ ಶೆಟ್ಟಿಗಾರ್, ಕ್ಷೇತ್ರ ಕಾರ್ಯದರ್ಶಿ ದಾಮೋದರ್ ಶೆಟ್ಟಿಗಾರ್,ಹಳೆಯಂಗಡಿ ವಲಯ ಸಮಿತಿಯ ಅಧ್ಯಕ್ಷರು ರವಿ. ಜೆ. ಅಮೀನ್ ಮುಲ್ಕಿ ವಲಯ ಕಾರ್ಯದರ್ಶಿ ವಾಣಿಶ್ರೀ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
07/08/2021 03:31 pm