ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಜಾತ್ರಾ ಮಹೋತ್ಸವ ಮಾರ್ಚ್ 24 ರಂದು ನಡೆಯಲಿದೆ. ಈ ಜಾತ್ರಾ ಮಹೋತ್ಸವದಲ್ಲಿ ಮತಾಂಧರಿಗೆ ವ್ಯಾಪಾರ ವಹಿವಾಟುಗಳನ್ನು ನಡೆಸಲು ಬಿಡುವುದಿಲ್ಲ ಎಂಬ ಫ್ಲೆಕ್ಸ್ ಮುಲ್ಕಿ ಬಸ್ ನಿಲ್ದಾಣ, ಬಪ್ಪನಾಡು ರಾಷ್ಟ್ರೀಯ ಹೆದ್ದಾರಿ ಜಂಕ್ಷನ್, ಕಾರ್ನಾಡು ಜಂಕ್ಷನ್ ಬಳಿ ಕಂಡುಬಂದಿದೆ..
ಕಳೆದ ಕೆಲ ದಿನಗಳ ಹಿಂದೆ ಕಾಪು ಮಾರಿ ಗುಡಿ ಜಾತ್ರಾ ಮಹೋತ್ಸವದಲ್ಲಿ ಅನ್ಯಕೋಮಿನ ವ್ಯಕ್ತಿಗಳಿಗೆ ಸಂತೆ ವಹಿವಾಟು ನಡೆಸಲು ಅವಕಾಶ ನೀಡುವುದಿಲ್ಲ ಎಂಬ ವಿವಾದದ ಬಳಿಕ ಮುಲ್ಕಿ ಬಪ್ಪನಾಡು ಜಾತ್ರಾ ಮಹೋತ್ಸವಕ್ಕೆ ಮತಾಂಧರಿಗೆ ವ್ಯಾಪಾರ ವಹಿವಾಟು ನಡೆಸಲು ಬಿಡುವುದಿಲ್ಲ ಎಂಬ ಫ್ಲೆಕ್ಸ್ ಹಾಕಲಾಗಿದೆ.
ಫ್ಲೆಕ್ಸ್ ನಲ್ಲಿ "ಈ ನೆಲದ ಸಂವಿಧಾನ ಮತ್ತು ಕಾನೂನುಗಳನ್ನು ಗೌರವಿಸದ, ನಾವು ಪೂಜಿಸುವ ಗೋವುಗಳನ್ನು ಅಮಾನುಷವಾಗಿ ಕೊಲ್ಲುವ, ಈ ದೇಶದ ಅಖಂಡತೆಗೆ ಸವಾಲು ಎಸೆಯುವ ಮತಾಂಧರು ಮತ್ತು ಗೋ ಕಟುಕರ ಜೊತೆಗೆ ನಾವು ನಮ್ಮ ಆರಾಧ್ಯ ದೇವಿಯಾದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವರ ಜಾತ್ರೆಯಲ್ಲಿ ವ್ಯಾಪಾರ ನಡೆಸಲು ಅವಕಾಶ ನೀಡುವುದಿಲ್ಲ" ಸಮಸ್ತ ಹಿಂದೂ ಬಾಂಧವರು ಎಂದು ಫ್ಲೆಕ್ಸ್ ನಲ್ಲಿ ಬರೆಯಲಾಗಿದೆ. ಇನ್ನು ಕಳೆದ ಹಲವಾರು ವರ್ಷಗಳಿಂದ ಮಲ್ಲಿಗೆ ವ್ಯಾಪಾರ ನಡೆಸುತ್ತಿರುವ ಅನ್ಯಧರ್ಮೀಯ ವ್ಯಾಪಾರಸ್ಥರಿಗೆ ಫ್ಲೆಕ್ಸ್ ಸವಾಲಾಗಿ ಪರಿಣಮಿಸುವ ಸಾಧ್ಯತೆಯಿದೆ.
PublicNext
22/03/2022 04:30 pm