ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಚಾತುರ್ಮಾಸ ವ್ರತಾಚರಣೆ; ಕಾಶೀ ಮಠಾಧೀಶರಿಂದ ಇಂದು ಪುರ ಪ್ರವೇಶ

ಮಂಗಳೂರು: ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ ವ್ರತಾಚರಣೆಯ ಅಂಗವಾಗಿ ಇಂದು ಪುರಪ್ರವೇಶಗೈದರು.

ಶ್ರೀ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಈ ಬಾರಿ ಮಂಗಳೂರಿನ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜುಲೈ 18ರಿಂದ ಚಾತುರ್ಮಾಸ ವ್ರತಾಚರಣೆ ನಡೆಸಲಿರುವರು‌. ಈ ಹಿನ್ನೆಲೆಯಲ್ಲಿ ಇಂದು ಶ್ರೀಗಳ ಪುರ ಪ್ರವೇಶ ಶನಿವಾರ ನಗರದ ರಥಬೀದಿಯಲ್ಲಿ ನಡೆಯಿತು.

ಶ್ರೀ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಕೊಂಚಾಡಿಯಲ್ಲಿ ಮೊಕ್ಕಾಂ ಹೂಡಿದ್ದರು.‌ ಅಲ್ಲಿಂದ ಆಗಮಿಸಿ ‌ಪುರಪ್ರವೇಶಗೈದ ಶ್ರೀಗಳವರಿಗೆ ಭವ್ಯ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಪುರಪ್ರವೇಶ ಕಾರ್ಯಕ್ರಮವು ಸ್ವದೇಶೀ ಸ್ಟೋರ್ ಬಳಿಯಿಂದ ಪ್ರಾರಂಭಗೊಂಡು ವೆಂಕಟರಮಣ ದೇವಸ್ಥಾನದವರೆಗೆ ನಡೆಯಿತು. ಈ ಸಂದರ್ಭ ಶ್ರೀಗಳವರು ಶ್ರೀ ದೇವರ ದರ್ಶನ ಪಡೆದು, ದೇವಳದ ಆಡಳಿತ ಮಂಡಳಿಯ ಪದಾಧಿಕಾರಿಗಳಿಂದ ಪಾದಪೂಜೆ ಪಡೆದರು.

Edited By : PublicNext Desk
Kshetra Samachara

Kshetra Samachara

09/07/2022 09:40 pm

Cinque Terre

1.47 K

Cinque Terre

0