ಮಂಗಳೂರು: ನಗರದ ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಮಂಗಳೂರು ವಕೀಲರ ಸಂಘದ ವಾರ್ಷಿಕ ಕ್ರೀಡಾಕೂಟವು ಇತ್ತೀಚಿಗೆ ನಡೆಯಿತು. ಜಿಲ್ಲಾ ನ್ಯಾಯಾಲಯದ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಮುರಳೀಧರ್ ಪೈ ಕ್ರೀಡಾಕೂಟವನ್ನು ಉದ್ಘಾಟಿಸಿದರು.
ಉದ್ಘಾಟನಾ ಪಂದ್ಯವು ನ್ಯಾಯಾಧೀಶರು ಹಾಗೂ ಹಿರಿಯ ವಕೀಲರ ನಡುವೆ ನಡೆದಿತ್ತು. ಈ ಪಂದ್ಯಾಟದಲ್ಲಿ ನ್ಯಾಯಧೀಶರ ತಂಡವು ಜಯ ಗಳಿಸಿದೆ. ಆ ಬಳಿಕ ಪುರುಷ ವಕೀಲರ ತಂಡದ ನಡುವೆ ಕ್ರಿಕೆಟ್ ಪಂದ್ಯಾಟ ಹಾಗೂ ಮಹಿಳಾ ವಕೀಲರ ನಡುವೆ ಥ್ರೋಬಾಲ್ ಪಂದ್ಯಾಟ ನಡೆಯಿತು. ಕ್ರಿಕೆಟ್ ನಲ್ಲಿ ಎಂಟು ವಕೀಲರ ತಂಡ ಭಾಗವಹಿಸಿದ್ದು, ಥ್ರೋಬಾಲ್ ನಲ್ಲಿ ಮೂರು ಮಹಿಳಾ ತಂಡ ಭಾಗವಹಿಸಿದೆ. ಹಗ್ಗ - ಜಗ್ಗಾಟ, ಮ್ಯೂಸಿಕಲ್ ಚೇರ್ ಸ್ಪರ್ಧೆ ನಡೆಯಿತು.
ಕ್ರಿಕೆಟ್ ಪಂದ್ಯಾಟದಲ್ಲಿ ರಾಘವೇಂದ್ರ ಎಚ್.ವಿ., ಇಸ್ಮಾಯಿಲ್ ಎಸ್. ಹಾಗೂ ದೇವಿಪ್ರಕಾಶ್ ಹೆಗ್ಡೆ ಮಾಲೀಕತ್ವದ ಡೆರ್ಬಿ ಸೂಪರ್ ಕಿಂಗ್ಸ್ ತಂಡ ಪ್ರಥಮ ಬಹುಮಾನ ಹಾಗೂ ದಿನಕರ್ ಶೆಟ್ಟಿ ಮತ್ತು ನಾರಾಯಣ ಲಮಾಣಿಯವರ ಬಾರ್ ಲಯನ್ಸ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
ಥ್ರೋ ಬಾಲ್ ಪಂದ್ಯಾಟದಲ್ಲಿ ಜಯಶ್ರೀ ರಟ್ಟೀಹಳ್ಳಿಯ ಮಾಲೀಕತ್ವದ ಪಿಂಕ್ ಪ್ಯಾಂಥರ್ ತಂಡ ಪ್ರಥಮ ಬಹುಮಾನ, ಮೊಹಮ್ಮದ್ ಅಸ್ಗರ್ ಮಾಲೀಕತ್ವದ ಬಾರ್ ಸ್ಟ್ರೈಕರ್ಸ್ ತಂಡ ದ್ವಿತೀಯ ಬಹುಮಾನ ಹಾಗೂ ವೈಟ್ ಟೈಗರ್ಸ್ ತಂಡ ತೃತಿಯ ಬಹುಮಾನ ಪಡೆದುಕೊಂಡಿರುತ್ತಾರೆ.
Kshetra Samachara
07/03/2022 06:33 pm