ಕಟೀಲು : ಅನುದಾನಿತ ಶ್ರೀ ದು.ಪ.ಹಿ.ಪ್ರಾ.ಶಾಲೆಯ ಪರಿಸರ ಸಂಘದ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಶಾಲಾ ಕೈ ತೋಟದಲ್ಲಿ ತರಕಾರಿ ಬೀಜ ಹಾಕುವ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಗ್ರೆಗರಿ ಸಿಕ್ವೇರಾ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಸಸಿಗಳನ್ನು ನೆಟ್ಟು ಆರೈಕೆ ಮಾಡುವ ಬಗ್ಗೆ ಮಾರ್ಗದರ್ಶನ ಮಾಡಿದರು. ವಿದ್ಯಾರ್ಥಿಗಳ ಜೊತೆ ಸಹಶಿಕ್ಷಕರಾದ ರಾಜೇಶ್ ಐ,ರಜನಿ, ಪವಿತ್ರಾ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣ ಕೆ, ಭಾಗವಹಿಸಿದರು.
Kshetra Samachara
04/06/2022 08:42 pm