ಮಂಗಳೂರು: ನಗರದ ಎಂಆರ್ಪಿಎಲ್ನಲ್ಲಿ ನಿರ್ಮಿಸಲಾದ 90 ಟನ್ ಸಾಮರ್ಥ್ಯದ ಎರೆಹುಳು ಗೊಬ್ಬರ ಘಟಕವನ್ನು ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ಸಚಿವಾಲಯದ ಜಂಟಿ ಕಾರ್ಯದರ್ಶಿ (ಸಂಸ್ಕರಣಾಗಾರ) ಸುನಿಲ್ ಕುಮಾರ್ ಉದ್ಘಾಟಿಸಿದರು.
90 ಟನ್ ಸಾಮರ್ಥ್ಯದ ಎರೆಹುಳು ಗೊಬ್ಬರ ಘಟಕವನ್ನು 1.40 ಕೋಟಿ ರೂ. ವೆಚ್ಚದಲ್ಲಿ ಎಂಆರ್ಪಿಎಲ್ ನಿರ್ಮಾಣ ಮಾಡಿದೆ. 2 ಸಾವಿರ ಎಕರೆ ವಿಸ್ತೀರ್ಣದಲ್ಲಿರುವ ಎಂಆರ್ಪಿಎಲ್ನಲ್ಲಿ ಮರದಿಂದ ಬಿದ್ದ ಎಲೆಗಳು, ತರಕಾರಿ ತ್ಯಾಜ್ಯ, ಕತ್ತರಿಸಿದ ಹುಲ್ಲು, ಕಾಗದದಂತಹ ತ್ಯಾಜ್ಯಗಳು ಸಾಕಷ್ಟು ಪ್ರಮಾಣದಲ್ಲಿ ಉಂಟಾಗುತ್ತಿತ್ತು. ಇದನ್ನು ಈ ಘಟಕದ ಮೂಲಕ ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ. ಈಗ ನಿರ್ಮಾಣವಾಗಿರುವ 90 ಟನ್ ತ್ಯಾಜ್ಯವನ್ನು 12 ಲಕ್ಷ ರೂ. ಮೌಲ್ಯದ 24 ಟನ್ ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ. ಇಲ್ಲಿ ಉತ್ಪಾದನೆಯಾಗುವ ಗೊಬ್ಬರವು 500 ಎಕರೆಗೂ ಹೆಚ್ಚು ಇರುವ ಹಸಿರು ವಲಯಕ್ಕೆ ಉಪಯೋಗವಾಗಲಿದೆ.
ಆಫ್ರಿಕನ್ ನೈಟ್ ಕ್ರಾಲರ್ ಎಂದು ಕರೆಯಲ್ಪಡುವ ವಿಶೇಷ ತಳಿ ಎಂಆರ್ಪಿಎಲ್ನ ಗೊಬ್ಬರ ಪ್ರಕ್ರಿಯೆಗೆ ಹುಳುಗಳಾಗಿ ಬಳಸಲಾಗುತ್ತದೆ. ಈ ಪ್ರತಿ ಎರೆಹುಳು ದಿನಕ್ಕೆ 4 ಕೆಜಿ ಘನತ್ಯಾಜ್ಯವನ್ನು ಗೊಬ್ಬರ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಕಾರ್ಯಕ್ರಮದಲ್ಲಿ ಎಂಆರ್ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ ವೆಂಕಟೇಶ್, ರಿಫೈನರಿ ನಿರ್ದೇಶಕ ಸಂಜಯ್ ವರ್ಮಾ, ಹಣಕಾಸು ನಿರ್ದೇಶಕ ಪೊಮಿಲಾ ಜಸ್ಪಾಲ್, ಮುಖ್ಯ ವಿಜಿಲೆನ್ಸ್ ಅಧಿಕಾರಿ ರಾಜೀವ್ ಕುಶ್ವಾ ಐಟಿಎಸ್, ಕಾರ್ಯ ನಿರ್ವಾಹಕ ನಿರ್ದೇಶಕ ( ಯೋಜನೆಗಳು) ಯು ವಿ ಐತಾಳ್, ಸಿಜಿಎಂ ಎಚ್ಎಸ್ಇಎಂಎಸ್ ಸುದರ್ಶನ್ ಉಪಸ್ಥಿತರಿದ್ದರು.
Kshetra Samachara
26/01/2021 01:07 pm