ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೃಷಿ : ತೋಕೂರು ಸ್ಪೋರ್ಟ್ಸ್ ಕ್ಲಬ್ ಮಹಿಳಾ ಸದಸ್ಯೆಯರಿಂದ ಗದ್ದೆಯಲ್ಲಿ ಫಸಲು ಕಟಾವು

ಮುಲ್ಕಿ:ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ,ನೆಹರು ಯುವ ಕೇಂದ್ರ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು, ಪಡುಪಣಂಬೂರು ಗ್ರಾಮ ಪಂಚಾಯತ್ ಮತ್ತು ದ ಕ. ಯುವಜನ ಒಕ್ಕೂಟ ಮಾರ್ಗದರ್ಶನಲ್ಲಿ ಹಳೆಯಂಗಡಿ ತೋಕೂರು ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ)ಆಶ್ರಯದಲ್ಲಿ ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಮುಂದುವರಿದ ಭಾಗವಾಗಿ ತೋಕೂರು "ಸಂಕೇಶ ಮನೆ ದಿ| ಕೃಷ್ಣ ಶೆಟ್ಟಿಯವರ ಪಾಳು ಬಿದ್ದ ಗದ್ದೆಯನ್ನು ಸಂಸ್ಥೆಯ ಸದಸ್ಯರಾದ ಶ್ರೀ ಕೇಶವ ದೇವಾಡಿಗ ಕೊರೋನಾ ಲಾಕ್ ಡೌನ್ ಸಂಕಷ್ಟ ಹಿನ್ನೆಲೆ ಉದ್ಯೋಗವಿಲ್ಲದೆ ಪರದಾಡುತ್ತಿದ್ದ ಸಂದರ್ಭದ ಮೂರು ತಿಂಗಳ ಹಿಂದೆ ಉಳುಮೆ ಮಾಡಿ ನಾಟಿ ಕಾರ್ಯ ಮುಗಿಸಿರುತ್ತಾರೆ.

ನಾಟಿ ಮಾಡಿದ ಪೈರು,ಬೆಳೆದು ಕಟಾವಿಗೆ ಸಿದ್ದ ಗೊಂಡಿರುವ ಈ ಸಂದರ್ಭದಲ್ಲಿ ಸಂಸ್ಥೆಯ ಸಾಂಸ್ಕೃತಿಕ ಕಾರ್ಯದರ್ಶಿ ಪ್ರಮೀಳ ಕೇಶವ ದೇವಾಡಿಗ ಇವರ ಮುಂದಾಳ್ವತದಲ್ಲಿ ಮಹಿಳಾ ಸದಸ್ಯೆಯರು ಗದ್ದೆಗಿಳಿದು ಫಸಲನ್ನು ಕಟಾವು ಮಾಡಿ ಮಾದರಿಯಾಗಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

30/10/2020 10:38 am

Cinque Terre

4.19 K

Cinque Terre

0

ಸಂಬಂಧಿತ ಸುದ್ದಿ