ಬಜಪೆ:ನಿಯಂತ್ರಣ ತಪ್ಪಿದ ಸ್ಕೂಟರೊಂದು ರಸ್ತೆಯ ಅಂಚಿನಲ್ಲಿನ ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆದ ಘಟನೆ ಬಜಪೆ - ಕಟೀಲು ರಾಜ್ಯ ಹೆದ್ದಾರಿಯ ಎಕ್ಕಾರಿನಲ್ಲಿ ನಿನ್ನೆ ಸಂಜೆ ನಡೆದಿದೆ.ಘಟನೆಯಲ್ಲಿ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಂಭೀರ ಗಾಯಗೊಂಡ ಸ್ಕೂಟರ್ ಸವಾರ ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಕೂಟರ್ ಸವಾರನ ಹೆಸರು ಹಾಗೂ ಊರು ತಿಳಿದು ಬಂದಿಲ್ಲ.
ನಿನ್ನೆ ಸಂಜೆ ಎಕ್ಕಾರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಜೋರಾಗಿ ಮಳೆಯು ಸುರಿಯುತ್ತಿದ್ದು, ಈ ವೇಳೆ ರಸ್ತೆಯಲ್ಲಿ ಸಾಗುತ್ತಿದ್ದ ಸ್ಕೂಟರ್ ಸವಾರನ ನಿಯಂತ್ರಣ ತಪ್ಪಿ, ರಸ್ತೆಯಂಚಿನಲ್ಲಿನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Kshetra Samachara
30/06/2022 12:21 pm