ಮುಲ್ಕಿ: ಕಿನ್ನಿಗೋಳಿ ಮೂಡಬಿದ್ರೆ ರಾಜ್ಯ ಹೆದ್ದಾರಿಯ ಮೂರುಕಾವೇರಿ ಬಳಿ ಟಿಪ್ಪರ್ ಗೆ ಆಟೋ ಡಿಕ್ಕಿಯಾಗಿ ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಳೆಯಂಗಡಿ ಕಡೆಯಿಂದ ಕಿನ್ನಿಗೋಳಿ ಮೂಲಕ ನೆಲ್ಲಿಗುಡ್ಡೆ ಕಡೆಗೆ ಹೋಗುತ್ತಿದ್ದ ಟಿಪ್ಪರ್(ಕೆ ಎ 19ಎ ಡಿ 2922) ಗೆ ಮೂರುಕಾವೇರಿ ಮಾರಿಗುಡಿ ದೇವಸ್ಥಾನದ ಸಮೀಪದ ಮೂಡಬಿದ್ರೆ ಕಡೆಯಿಂದ ಬರುತ್ತಿದ್ದ ಆಟೋ (ಕೆಎ-19-ಸಿ-8514) ಚಾಲಕನ ನಿರ್ಲಕ್ಷ್ಯ ಚಾಲನೆಯಿಂದ ಟಿಪ್ಪರ್ ನ ಎದುರು ಭಾಗಕ್ಕೆ ಡಿಕ್ಕಿ ಹೊಡೆದಿದ್ದಾನೆ.
ಅಪಘಾತದ ರಭಸಕ್ಕೆ ಆಟೋ ಸಂಪೂರ್ಣ ಜಖಂಗೊಂಡಿದ್ದು ಚಾಲಕ ಸುರೇಶ್, ಪ್ರಯಾಣಿಕರಾದ ಗಿರಿಜಾ, ಸವಿತಾ ,ಕು. ದೀಕ್ಷ ಗಂಭೀರ ಗಾಯಗಳೊಂದಿಗೆ ಕಿನ್ನಿಗೋಳಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದಿಂದ ಟಿಪ್ಪರ್ ನ ಎದುರು ಭಾಗ ಕೂಡ ಹಾನಿಯಾಗಿದೆ.
ಆಟೋ ಚಾಲಕನ ವಿರುದ್ಧ ಸುರತ್ಕಲ್ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Kshetra Samachara
04/06/2022 09:58 pm