ಬಂಟ್ವಾಳ: ಬಿ.ಸಿ.ರೋಡು- ಪುಂಜಾಲಕಟ್ಟೆ ಹೆದ್ದಾರಿಯ ಬಂಟ್ವಾಳ ಸಮೀಪದ ಚಂಡ್ತಿಮಾರ್ ಬಳಿ ಬುಧವಾರ ಮಧ್ಯಾಹ್ನ ಟ್ಯಾಂಕರ್ ಹಾಗೂ ಮಾರುತಿ ಕಾರಿನ ಮಧ್ಯೆ ಢಿಕ್ಕಿ ಸಂಭವಿಸಿ ಕಾರು ಚಾಲಕ ಗಂಭೀರ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿ ಗಾಯಾಳು ಮಡಂತ್ಯಾರಿನ ಕ್ಯಾಟರಿಂಗ್ ಉದ್ಯಮಿ ರೋಶನ್ ಸೆರಾವೊ (37) ಚಿಕಿತ್ಸೆ ಫಲಕಾರಿ ಆಗದೆ ಸಾವನ್ನಪ್ಪಿದರು.
ಅಪಾಯಕಾರಿ ಜಾಗವಾಗಿರುವ ಚಂಡ್ತಿಮಾರ್ ಪರಿಸರದಲ್ಲಿ ಚಿಕ್ಕಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇರುತ್ತದೆ. ಇಂದು ಮಧ್ಯಾಹ್ನ ಅತಿವೇಗದಲ್ಲಿ ಸಂಚರಿಸುತ್ತಿದ್ದ ವಾಹನಗಳೆರಡರ ನಡುವೆ ಡಿಕ್ಕಿಯಾದ ಕಾರಣ, ಘಟನೆಯಲ್ಲಿ ಎರಡೂ ವಾಹನಗಳು ಜಖಂಗೊಂಡಿದ್ದು, ಕಾರು ರಸ್ತೆಯ ಪಕ್ಕಕ್ಕೆ ಇಳಿದಿತ್ತು.
ಬಂಟ್ವಾಳ ಸಂಚಾರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದರು.
Kshetra Samachara
01/06/2022 10:10 pm