ಸುಳ್ಯ: ಕಾಲೇಜಿನ ಶೌಚಾಲಯದಲ್ಲಿ ಕುಸಿದು ಬಿದ್ದು ಸ್ವಚ್ಛತಾ ಕಾರ್ಮಿಕ ಸಾವು

ಸುಳ್ಯ: ಶೌಚಾಲಯದೊಳಗೇ ಸ್ವಚ್ಛತಾ ಕಾರ್ಮಿಕರೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಸುಳ್ಯದ ಎಂಜಿನಿಯರಿಂಗ್ ಕಾಲೇಜಿನ ಸ್ವಚ್ಛತಾಗಾರ ಸುಳ್ಯದ ಐವರ್ನಾಡಿನ ಕುಳ್ಳಂಪಾಡಿ ಸುಂದರ (42) ಮೃತಪಟ್ಟವರು.

ಸುಂದರ ಅವರು ಬುಧವಾರ ಕೆಲಸಕ್ಕೆ ಬಂದಿದ್ದರು. ಶೌಚಾಲಯವನ್ನು ಸ್ವಚ್ಛಗೊಳಿಸುವ ಸಂದರ್ಭ ಹಠಾತ್ ಅಲ್ಲೇ ಕುಸಿದು ಬಿದ್ದು ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.

ಗುರುವಾರ ಬೆಳಗ್ಗೆ ಕಾಲೇಜಿಗೆ ಬಂದವರು ಶೌಚಾಲಯಕ್ಕೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಸುಳ್ಯ ಪೊಲೀಸರು ಧಾವಿಸಿ, ಮಹಜರು ನಡೆಸಿದರು.

Kshetra Samachara

Kshetra Samachara

10 days ago

Cinque Terre

2.85 K

Cinque Terre

0