ಮುಲ್ಕಿ: ಕಿನ್ನಿಗೋಳಿ ಸಮೀಪದ ಬಳ್ಕುಂಜೆ ಗ್ರಾಪಂ ವ್ಯಾಪ್ತಿಯ ಕೊಲ್ಲೂರು ಪದವು ಬಳಿ ಬೈಕ್ ಸ್ಕಿಡ್ ಆಗಿ ಸಹ ಸವಾರರಾದ ಮಹಿಳೆ ಮೃತಪಟ್ಟಿದ್ದಾರೆ.
ಮೃತರನ್ನು ಕವತ್ತಾರು ನಿವಾಸಿ ವಿಮಲ ಸುವರ್ಣ (55) ಎಂದು ಗುರುತಿಸಲಾಗಿದೆ. ವಿಮಲಾ ಸುವರ್ಣ ಅವರು ಮನೋಜ್ ಎಂಬವರ ಬೈಕ್ ನಲ್ಲಿ ಸಹ ಸವಾರರಾಗಿ ಕಿನ್ನಿಗೋಳಿ ಕಡೆಯಿಂದ ಕವತ್ತಾರು ಕಡೆಗೆ ಬರುತ್ತಿದ್ದಾಗ ಕೊಲ್ಲೂರು ಪದವು ಬಳಿ ಬೈಕ್ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ.
ಅಪಘಾತದಿಂದಾಗಿ ವಿಮಲ ಸುವರ್ಣ ರಸ್ತೆಗೆ ಬಿದ್ದು, ತಲೆಯ ಬಲ ಬದಿಗೆ ಗಂಭೀರ ಗಾಯವಾಗಿ ಕಿನ್ನಿಗೋಳಿ ಕಾನ್ಸೆಟ್ಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಮಂಗಳೂರು ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
01/02/2021 07:27 pm