ಹಳೆಯಂಗಡಿ: ಸಸಿಹಿತ್ಲು ಮುಂಡ ಬೀಚಿನಲ್ಲಿ ಭಾನುವಾರ ನಡೆದ ಅವಘಡದಲ್ಲಿ ನಾಪತ್ತೆಯಾಗಿದ್ದ ಹಳೆಯಂಗಡಿ ಬಳಿ ತೋಕೂರು ನಿವಾಸಿ ಬಾಬು ಶೆಟ್ಟಿ ಅವರ ಶೋಧ ಕಾರ್ಯ ಮುಂದುವರಿದಿದೆ.
ರವಿವಾರ ಸಂಜೆ ನೀರಿನ ಸೆಳೆತಕ್ಕೆ ಸಿಲುಕಿದ ಘಟನೆಯಲ್ಲಿ ಮೃತಪಟ್ಟ ಸಾನೂರಿನ ಸುಂದರ ಶೆಟ್ಟಿ(45) ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಸೋಮವಾರ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.
ಸುಂದರ ಶೆಟ್ಟಿ ಅವರ ಪತ್ನಿ ತುಂಬು ಗರ್ಭಿಣಿ ಆಗಿದ್ದು ಈ ಘಟನೆಯಿಂದ ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ. ಹಾಗು ಮೀನುಗಾರರಿಂದ ರಕ್ಷಿಸಲ್ಪಟ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಯುತ್ತಿರುವ ವಿಜೇತ ಹಾಗೂ ಶಂಕರ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಸೋಮವಾರ ತಡರಾತ್ರಿವರೆಗೂ ವ್ಯಕ್ತಿಯ ಹುಡುಕಾಟ ನಡೆಸಿದ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಧನರಾಜ್ ಕೋಟ್ಯಾನ್ ಚಂದ್ರಕುಮಾರ್ ಅವರ ಮುಂದಾಳತ್ವದಲ್ಲಿ ಧರ್ಮಾನಂದ ತೋಕೂರು, ರಮೇಶ್, ಸಂತೋಷ್, ಶೇಖರ, ಮತ್ತು ಮನು ಈಜುಗಾರರ ತಂಡ ಇಂದು ಪುನಃ ಬೆಳಿಗ್ಗೆಯಿಂದಲೇ ಹುಡುಕಾಟದಲ್ಲಿ ತೊಡಗಿರುತ್ತಾರೆ.
Kshetra Samachara
12/01/2021 10:59 am