ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಕೊಲ್ನಾಡು ಶ್ರೀ ಚಂದ್ರಮೌಳೇಶ್ವರ ದೇವಸ್ಥಾನದ ಕ್ರಾಸ್ ಬಳಿ ಬಸ್ಸೊಂದು ಸ್ಕೂಟರಿಗೆ ಡಿಕ್ಕಿಯಾಗಿ ಸವಾರ ಹಾಗೂ ಸಹಸವಾರೆ ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಮಂಗಳೂರು ವೆಂಕಟರಮಣ ಕಾಲೊನಿ ಬಳಿಯ ನಿವಾಸಿ ಗುಲಾಂ ಎಂದು ತಿಳಿದು ಬಂದಿದ್ದು, ಮಹಿಳೆಯ ಬಗ್ಗೆ ತಿಳಿದು ಬಂದಿಲ್ಲ. ಕಾರ್ಕಳದಿಂದ ಮಂಗಳೂರು ಕಡೆಗೆ ಬರುತ್ತಿದ್ದ ಬಸ್ಸು ಕೊಲ್ನಾಡು ತಲುಪುತ್ತಿದ್ದಂತೆಯೇ ಸ್ಕೂಟರ್ ಗೆ ಡಿಕ್ಕಿ ಹೊಡೆದಿದ್ದು, ಈ ಸಂದರ್ಭ ಸ್ಕೂಟರಿನಲ್ಲಿದ್ದ ಸವಾರರು ಕೆಳಕ್ಕೆ ಬಿದ್ದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕೂಡಲೇ ಸ್ಥಳೀಯರು ಗಂಭೀರ ಗಾಯಗೊಂಡ ಇಬ್ಬರನ್ನೂ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಸ್ಸು ಚಾಲಕನ ನಿರ್ಲಕ್ಷ್ಯ ದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈ ಬಸ್ಸು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈತ ಬದಲಿ ಚಾಲಕನಾಗಿದ್ದು, ಕಾರ್ಕಳದಿಂದ ಬರುತ್ತಿರುವಾಗಲೇ ಕೆಲವು ಕಡೆ ಪ್ರಯಾಣಿಕರ ವಿರುದ್ಧ ಕ್ಷುಲ್ಲಕ ಕಾರಣಕ್ಕೆ ರೇಗಾಡಿದ್ದಾನೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ. ಸುರತ್ಕಲ್ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.
Kshetra Samachara
11/01/2021 08:55 am