ಬಂಟ್ವಾಳ: ಬಂಟ್ವಾಳ ತಾಲೂಕಿನ ಮಾಣಿ ಸಮೀಪ ಬುಡೋಳಿ ಎಂಬಲ್ಲಿ ಕಾರೊಂದು ರಸ್ತೆ ಪಕ್ಕದ ಬೃಹತ್ ಹೊಂಡಕ್ಕೆ ಉರುಳಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಚಾಲಕನ ನಿಯಂತ್ರಣ ಕಳೆದುಕೊಂಡ ಪರಿಣಾಮ ಕಾರು ರಸ್ತೆ ಬದಿಯ ಹೊಂಡಕ್ಕೆ ಉರುಳಿ ಬಿತ್ತು. ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬುಡೋಳಿ ಸಮೀಪ ಅಪಾಯಕಾರಿ ಹೊಂಡವೊಂದಿದ್ದು, ಇಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತವೆ. ಕಾರು ಬಿದ್ದ ಪರಿಣಾಮ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಕಳೆದ ಕೆಲವು ಸಮಯದಿಂದ ಈ ಅಪಾಯಕಾರಿ ಹೊಂಡಕ್ಕೆ ಹಲವು ವಾಹನಗಳು ಬಿದ್ದಿದ್ದು, ಈ ಬಗ್ಗೆ ಮಾಧ್ಯಮಗಳಲ್ಲಿ ಹಲವು ಬಾರಿ ವರದಿಗಳು ಬಂದಿದ್ದವು.
Kshetra Samachara
07/01/2021 06:37 pm