ಬಂಟ್ವಾಳ: ಮನೆ ನಿರ್ಮಾಣ ಕಾಮಗಾರಿ ವೇಳೆ ಕಾರ್ಮಿಕನ ತಲೆಯ ಮೇಲೆಯೇ ಕಾಂಕ್ರೀಟಿಕರಣದ ಲಿಂಟಲ್ ಕಲ್ಲು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬಂಟ್ವಾಳ ಸಮೀಪದ ಸಂಗಬೆಟ್ಟುವಿನಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.
ಸಿದ್ದಕಟ್ಟೆಯ ಮಂಚಕಲ್ಲು ನಿವಾಸಿ ಸೇಸಪ್ಪ ಗೌಡ ಅವರ ಮಗ ರಮಾನಂದ ಗೌಡ ( 30) ಮೃತಪಟ್ಟವರು. ವೃತ್ತಿಯಲ್ಲಿ ಮೇಸ್ತ್ರಿಯಾಗಿರುವ ಇವರು ಸೇಸಪ್ಪಗೌಡರ ಇಬ್ಬರು ಪುತ್ರರಲ್ಲಿ ಹಿರಿಯವನಾಗಿದ್ದು, ಅವಿವಾಹಿತರಾಗಿದ್ದಲ್ಲದೆ ಮನೆಗೂ ಆಧಾರವಾಗಿದ್ದರು.
ಸಿದ್ದಕಟ್ಟೆ ಬಳಿಯ ಸಂಗಬೆಟ್ಟು ಎಂಬಲ್ಲಿ ನೂತನ ಮನೆ ನಿರ್ಮಾಣ ಕಾಮಗಾರಿಯಲ್ಲಿ ನಿರತರಾಗಿದ್ದಾಗ ಆಕಸ್ಮಿಕವಾಗಿ ಮೇಲ್ಭಾಗದ ಲಿಂಟಲ್ ಕಲ್ಲು ಅಡಿಭಾಗದಲ್ಲಿದ್ದ ರಮಾನಂದ ಅವರ ತಲೆ ಮೇಲೆ ಬಿದ್ದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೂವರು ಕಾರ್ಮಿಕರು ಈ ಮನೆ ನಿರ್ಮಾಣ ಕೆಲಸದಲ್ಲಿ ನಿರತರಾಗಿದ್ದರು.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಎಸ್.ಐ. ಪ್ರಸನ್ನ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯಿತು.
Kshetra Samachara
07/10/2020 03:28 pm