ಮೂಡುಬಿದಿರೆ: ಮೂಡುಮಾರ್ನಾಡು ಗ್ರಾಮದ ಬೆಳುವಾಯಿ- ಅಳಿಯೂರು ರಸ್ತೆಯಲ್ಲಿರುವ ಶ್ರೀ ಮಹಮ್ಮಾಯಿ ಮಂದಿರದ ಬಳಿ ಡಿ.15ರಂದು ರಾತ್ರಿ ಬೈಕ್ ಸ್ಕಿಡ್ ಆಗಿ ಗಂಭೀರವಾಗಿ ಗೊಂಡಿದ್ದ ಬೈಕ್ ಸವಾರ ಸಂತೋಷ್ ಜೈನ್ (25) ಡಿ. 17ರಂದು ರಾತ್ರಿ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕೃಷಿ, ತೋಟ ನಿರ್ವಹಣೆ ಜೊತೆಗೆ ಇಲೆಕ್ಟಿಕಲ್, ಅಡುಗೆ ಕೆಲಸಗಳಲ್ಲಿ ಸಂತೋಷ್ ಪರಿಣತರಾಗಿದ್ದರು.
ಉರಿಯಾಲದ ಆದಿರಾಜ ಜೈನ್ ಅವರ ಪುತ್ರರಾಗಿರುವ ಸಂತೋಷ್ ಅವರಿಗೆ ಮೂವರು ಸಹೋದರಿಯರಿದ್ದು, ಮೂವರಿಗೂ ಮದುವೆಯಾಗಿದೆ.
ಕೊನೆಯವರಾದ ಸಂತೋಷ್ ಅವಿವಾಹಿತರಾಗಿದ್ದರು. ತಂದೆ, ತಾಯಿ ತೀವ್ರ ಅಸೌಖ್ಯದಿಂದ ಬಳಲುತ್ತಿದ್ದು, ಅವರ ಎಲ್ಲ ಆರೈಕೆ, ಪಾಲನೆಯನ್ನು ಸಂತೋಷ್ ಮಾಡುತ್ತಿದ್ದರು.
Kshetra Samachara
18/12/2020 10:45 pm