ಮೂಲ್ಕಿ: ಕಿನ್ನಿಗೋಳಿ ಸಮೀಪದ ಬಟ್ಟಕೋಡಿ ಎಂಬಲ್ಲಿ ಕಬ್ಬಿನಿಂದ ರಸ ತೆಗೆಯುವ ಸಂದರ್ಭ ಮಹಿಳೆಯ ಕೈ ಯಂತ್ರಕ್ಕೆ ಸಿಲುಕಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಕಿನ್ನಿಗೊಳಿ ಬಟ್ಟಕೋಡಿ ಬಳಿಯ ನಿವಾಸಿ, ಬಾಡಿಗೆ ಮನೆಯಲ್ಲಿ ವಾಸ್ತವ್ಯವಿರುವ ರೇಷ್ಮಾ ನವೀನ್ (34) ಗಾಯಾಳು ಮಹಿಳೆ.
ರೇಷ್ಮಾ ಅವರು ಎರಡು ತಿಂಗಳಿನಿಂದ ಕಿನ್ನಿಗೋಳಿ- ಮುಲ್ಕಿ ರಾಜ್ಯ ಹೆದ್ದಾರಿಯ ಬಟ್ಟ ಕೋಡಿ ಬಳಿ ಕಬ್ಬಿನ ಜ್ಯೂಸ್ ಅಂಗಡಿ ಇಟ್ಟಿದ್ದು, ಎಂದಿನಂತೆ ಶುಕ್ರವಾರ ಮಧ್ಯಾಹ್ನ ಸುಮಾರು 3ರ ವೇಳೆಗೆ ಕಬ್ಬಿನ ಜ್ಯೂಸ್ ಮಾಡುತ್ತಿರುವಾಗ ಆಕಸ್ಮಿಕವಾಗಿ ಕೈ ಯಂತ್ರಕ್ಕೆ ಸಿಲುಕಿಕೊಂಡು, ನೋವಿನಿಂದ ಒದ್ದಾಡುತ್ತಿರುವಾಗ ದಾರಿಯಲ್ಲಿ ಹೋಗುತ್ತಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಹಾಗೂ ಸ್ಥಳೀಯರು ಸೇರಿ ಕೂಡಲೇ ಯಂತ್ರದಲ್ಲಿ ಸಿಲುಕಿಕೊಂಡಿದ್ದ ಮಹಿಳೆಯ ಕೈಯನ್ನು ಶ್ರಮ ಪಟ್ಟು ಹೊರ ತೆಗೆದಿದ್ದಾರೆ.
ಬಳಿಕ ಆಕೆಯನ್ನು ಮುಕ್ಕ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ವೇಳೆ ಐವಾನ್ ಡಿಸೋಜ ಅವರು ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಮಹಿಳೆಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಸೂಚಿಸಿದ್ದಾರೆ.
Kshetra Samachara
18/12/2020 04:45 pm