ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ: ಪಿಕಪ್- ಬೈಕ್ ಡಿಕ್ಕಿ; ಸವಾರನಿಗೆ ಗಂಭೀರ ಗಾಯ

ಬಂಟ್ವಾಳ: ಪಿಕಪ್ ಮತ್ತು ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ವಿಟ್ಲ ಸಮೀಪದ ಉಕ್ಕುಡದಲ್ಲಿ ನಡೆದಿದೆ.

ವಿಟ್ಲ ಕಡೆಯಿಂದ ಕಾಸರಗೋಡು ರಸ್ತೆಯಲ್ಲಿ ಪೆರ್ಲ ಕಡೆ ತೆರಳುತ್ತಿದ್ದ ಬೈಕ್ ಗೆ ಎದುರಿನಿಂದ ಬಂದ ಪಿಕಪ್ ವಾಹನ ಉಕ್ಕುಡ ಚೆಕ್ ಪೋಸ್ಟ್ ಗೇಟ್ ಮುಂಭಾಗ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಬೈಕ್ ಪಿಕಪ್ ವಾಹನದ ಮುಂದಿನ ಚಕ್ರದಡಿ ಸಿಕ್ಕಿಹಾಕಿಕೊಂಡಿತ್ತು. ಬೈಕ್ ಸವಾರ ಕಾಸರಗೋಡು ಮಗಲ್ಪಾಡಿ ನಿವಾಸಿ ಹನೀಫ್ ಎಂದು ತಿಳಿದು ಬಂದಿದೆ. ಗಾಯಗೊಂಡ ಸವಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.

Edited By : Vijay Kumar
Kshetra Samachara

Kshetra Samachara

01/12/2020 10:47 pm

Cinque Terre

9.37 K

Cinque Terre

0

ಸಂಬಂಧಿತ ಸುದ್ದಿ