ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಗಂಟಲಲ್ಲಿ ಗೋಳಿಬಜೆ ಸಿಲುಕಿ ಕೂಲಿಕಾರ್ಮಿಕ ಸಾವು

ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳಚಿಕಂಬಳ ಬಳಿ ಕೂಲಿ ಕಾರ್ಮಿಕ ಗಂಟಲಿನಲ್ಲಿ ಗೋಳಿಬಜೆ ಸಿಲುಕಿ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ಸ್ಥಳೀಯ ನಿವಾಸಿ ಹರೀಶ ರಾಮಪ್ಪ ಅಮೀನ್ (55) ಮೃತಪಟ್ಟವರು. ಹರೀಶ ಪಡುಬಿದ್ರಿಯಲ್ಲಿ ಕೂಲಿ ಕಾರ್ಮಿಕರಾಗಿದ್ದು, ಮುಲ್ಕಿ ಕೊಳಚಿಕಂಬಳದಲ್ಲಿ ಅಕ್ಕನ ಜೊತೆ ವಾಸಿಸುತ್ತಿದ್ದರು.

ಮೃತರ ಪತ್ನಿ, ಮಗ ಮುಂಬೈಯಲ್ಲಿ ನೆಲೆಸಿದ್ದು ಆಗಾಗ ಬಂದುಹೋಗುತ್ತಿದ್ದರು. ಕೆಲ ದಿನಗಳ ಹಿಂದೆ ಅವರ ಪತ್ನಿ ಹಾಗೂ ಮಗ ಮುಂಬೈನಿಂದ ಬಂದಿದ್ದು ಮನೆಯೊಳಗೆ ಭಾರಿ ರಾದ್ಧಾಂತ ನಡೆದಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಆದರೆ, ನಿನ್ನೆ ಪಡುಬಿದ್ರಿಯಿಂದ ಕೂಲಿ ಕೆಲಸ ಮುಗಿಸಿ ಮನೆಗೆ ಬರುವಾಗ ಹೋಟೆಲಿನಿಂದ ಗೋಳಿಬಜೆ ತಂದಿದ್ದು ತಿನ್ನುವಾಗ ಗಂಟಲೊಳಗೆ ಸಿಲುಕಿದ್ದು ಕೂಡಲೇ ಸ್ಥಳೀಯ ರಿಕ್ಷಾ ಚಾಲಕರೊಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.

ಮೃತಪಟ್ಟಿರುವ ಬಗ್ಗೆ ಸ್ಥಳೀಯರು ಸಂಶಯ ಪಟ್ಟಿದ್ದು ನಿಗೂಢ ಸಾವಿನ ಬಗ್ಗೆ ಕೂಡಲೇ ಮುಲ್ಕಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಬಳಿಕ ಮುಲ್ಕಿ ಸರಕಾರಿ ಆಸ್ಪತ್ರೆಯಲ್ಲಿ ಶವ ಮಹಜರು ವೇಳೆ ಗೋಳಿಬಜೆ ಗಂಟಲಲ್ಲಿ ಸಿಲುಕಿ ಮೃತಪಟ್ಟಿರುವ ಬಗ್ಗೆ ವೈದ್ಯರು ವರದಿ ನೀಡಿದ್ದಾರೆ.

ಮುಲ್ಕಿ ಪೊಲೀಸ್ ಠಾಣೆಯಲ್ಲಿ ನಿಗೂಢ ಸಾವಿನ ಬಗ್ಗೆ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

24/10/2020 09:55 pm

Cinque Terre

20.35 K

Cinque Terre

0

ಸಂಬಂಧಿತ ಸುದ್ದಿ