ಕಾಸರಗೋಡು: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಕಾಂಕ್ರೀಟ್ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಆರೋಗ್ಯಾಧಿಕಾರಿ ಮೃತಪಟ್ಟು, ವೈದ್ಯೆ ಸೇರಿದಂತೆ ಆರು ಮಂದಿ ಗಾಯಗೊಂಡ ಘಟನೆ ಅ.9ರ ಶುಕ್ರವಾರದಂದು ಮಧ್ಯಾಹ್ನ ನೀಲೇಶ್ವರದ ಕರುವೇಚ್ಚೆರಿ ತಿರುವಿನಲ್ಲಿ ನಡೆದಿದೆ.
ಮೃತರನ್ನು ಬೇಡಡ್ಕ ತಾಲೂಕು ಆಸ್ಪತ್ರೆಯ ಹೆಲ್ತ್ ಇನ್ಸ್ ಪೆಕ್ಟರ್ ತ್ರಿಶ್ಯೂರು ಮೂಲದ ಪೌಲ್ ಗ್ಲೆಟ್ಟೋ ಎಲ್ ಮೇರೋಕಿ (49) ಎಂದು ಗುರುತಿಸಲಾಗಿದೆ.
ಕಾರಿನಲ್ಲಿದ್ದ ಜ್ಯೂನಿಯರ್ ಹೆಲ್ತ್ ಇನ್ಸ್ ಪೆಕ್ಟರ್ ಪ್ರದೀಪ್, ಆಸ್ಪತ್ರೆ ಅಸಿಸ್ಟೆಂಟ್ ಸರ್ಜನ್ ಡಾ. ದಿನು ಗಗನ್, ದಿನು ಅವರ ತಾಯಿ, ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರು ರಜೆಯ ಹಿನ್ನೆಲೆ ಊರಿಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.
Kshetra Samachara
09/10/2020 10:52 pm