ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಅತಿಕಾರಿಬೆಟ್ಟು ದೆಪ್ಪುಣಿ ಗುತ್ತು ರೈಲ್ವೆ ಸೇತುವೆ ಸಮೀಪ ಕೂಲಿಕಾರ್ಮಿಕರೊಬ್ಬರು ಗೂಡ್ಸ್ ರೈಲು ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳುವನ್ನು ಕವತ್ತಾರ್ ನಿವಾಸಿ ರಾಜು(45) ಎಂದು ಗುರುತಿಸಲಾಗಿದೆ. ರಾಜು ಅತಿಕಾರಿಬೆಟ್ಟು ಮೈಲೊಟ್ಟು ಪರಿಸರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಕೆಲಸ ಬಿಟ್ಟು ಮನೆಗೆ ಹಳಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ಗೂಡ್ಸ್ ರೈಲು ಡಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡು ನರಳಾಡುತ್ತಿದ್ದ ಅವರನ್ನು ಕೂಡಲೇ ಮುಲ್ಕಿಯ ಕಾರ್ನಾಡು ಆಪದ್ಬಾಂಧವ ಆಸಿಫ್ ಮತ್ತು ಪೊಲೀಸರು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
Kshetra Samachara
09/10/2020 09:06 pm