ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್: ಸ್ಕೂಟರ್ ಭಸ್ಮ

ಅಂಕೋಲಾ: ಪಟ್ಟಣದ ಗ್ಯಾರೇಜ್‌ ಒಂದರಲ್ಲಿ ರಿಪೇರಿಗೆ ತಂದಿದ್ದ ಸ್ಕೂಟರ್‌ನ ಬ್ಯಾಟರಿ ಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಸ್ಕೂಟರ್ ಸಂಪೂರ್ಣ ಭಸ್ಮವಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಇಲ್ಲಿಯ ಕೆ.ಸಿ. ರಸ್ತೆಗೆ ಹೊಂದಿಕೊಂಡಿರುವ ಹಳೆ ಬಝಾರ್‌ನಲ್ಲಿರುವ ಪ್ರಕಾಶ ನಾಯ್ಕ ಎಂಬವರ ಗ್ಯಾರೇಜ್‌ನಲ್ಲಿ ಈ ಘಟನೆ ನಡೆದಿದೆ.

ಗ್ಯಾರೇಜ್‌ಗೆ ಬೊಬ್ರುವಾಡದ ಕೃಷ್ಣ ಜಿ.ನಾಯ್ಕ ತಮ್ಮ ಪ್ಲೇಜರ್ ವಾಹನ ರಿಪೇರಿಗೆ ತಂದಿದ್ದರು. ರಿಪೇರಿ ಸಂದರ್ಭ ಮೆಕ್ಯಾನಿಕ್, ಸ್ಕೂಟರ್ ಸ್ಟಾರ್ಟ್‌ ಮಾಡುವಾಗ ಆಕಸ್ಮಿಕವಾಗಿ ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿದೆ.

ಕ್ಷಣಾರ್ಧದಲ್ಲಿ ಬೆಂಕಿ ಇಡೀ ಸ್ಕೂಟರನ್ನು ವ್ಯಾಪಿಸಿತು. ಅದರಲ್ಲಿದ್ದ ಪೆಟ್ರೋಲ್‌ಗೆ ಬೆಂಕಿ ಹೊತ್ತುಕೊಂಡ ಕಾರಣ ಇಡೀ ಸ್ಕೂಟರ್ ಬೆಂಕಿಗಾಹುತಿಯಾಯಿತು.

ಗ್ಯಾರೇಜ್‌ನ ಹೊರ ಆವರಣದಲ್ಲಿ ಈ ಘಟನೆ ನಡೆದಿರುವುದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಸ್ಥಳಕ್ಕೆ ಅಗ್ನಿಶಾಮದಳ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದರು.

ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

09/10/2020 07:41 pm

Cinque Terre

10.03 K

Cinque Terre

0

ಸಂಬಂಧಿತ ಸುದ್ದಿ