", "articleSection": "Politics,Infrastructure,Human Stories,Education", "image": { "@type": "ImageObject", "url": "https://prod.cdn.publicnext.com/s3fs-public/378325-1736584346-6.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ArunPrasadMandya" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಡ್ಯ: ನಿನ್ನೆ ತಮ್ಮ ಕ್ಷೇತ್ರದ ವ್ಯಾಪ್ತಿಗೆ ಬರುವ ಕೆರೆತೊಣ್ಣೂರು ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ಕೊಟ್ಟ ಮೇಲುಕೊಟೆ ಶಾಸಕ ದರ್ಶನ್ ಪುಟ್...Read more" } ", "keywords": ",Mandya,Politics,Infrastructure,Human-Stories,Education", "url": "https://publicnext.com/article/nid/Mandya/Politics/Infrastructure/Human-Stories/Education" } ಮಂಡ್ಯ: ಹಾಸ್ಟೆಲ್‌ಗೆ ಕಾಲಿಟ್ರೆ ಕಾಲ್ ಕತ್ತರಿಸಿ ಹಾಕ್ತೀನಿ - ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವಾಜ್..
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ: ಹಾಸ್ಟೆಲ್‌ಗೆ ಕಾಲಿಟ್ರೆ ಕಾಲ್ ಕತ್ತರಿಸಿ ಹಾಕ್ತೀನಿ - ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವಾಜ್..

ಮಂಡ್ಯ: ನಿನ್ನೆ ತಮ್ಮ ಕ್ಷೇತ್ರದ ವ್ಯಾಪ್ತಿಗೆ ಬರುವ ಕೆರೆತೊಣ್ಣೂರು ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ಕೊಟ್ಟ ಮೇಲುಕೊಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಲ್ಲಿ ವಾರ್ಡನ್ ಇಲ್ಲದ ಕಾರಣ ಕೆಂಡಾಮಂಡಲರಾದ್ರು.

ಕೂಡಲೇ ಆ ವಾರ್ಡನ್ ಗೆ ಅಲ್ಲಿಂದಲೇ ಫೋನ್ ಮಾಡಿದ ಶಾಸಕರು ಫುಲ್ ಅವಾಜ಼್ ಹಾಕಿದ್ದಾರೆ. ಹಾಸ್ಟೆಲ್‌ ಗೆ‌ ಬಾರದ ವಾರ್ಡನ್ ತಮ್ಮ ತಾಯಿಯನ್ನ ಅಲ್ಲಿ ಬಿಟ್ಟು ಎಲ್ಲೋ ‌ಹೊರಟು ಹೋಗ್ತಾರೆ ಅಂತ ವಿದ್ಯಾರ್ಥಿಗಳು ದೂರು ಹೇಳಿಕೊಂಡಾಗ ಮಾತನಾಡುವ ಭರದಲ್ಲಿ ಸಂಯಮ ಮರೆತ ಶಾಸಕರು‌ ವಾರ್ಡನ್ ಗೆ ನೀನು ಮತ್ತೆ ಹಾಸ್ಟೆಲ್ ಗೆ ‌ಕಾಲಿಟ್ಟರೆ ನಿನ್ನ ಕಾಲು ಕತ್ತರಿಸ್ತೀನಿ ಅಂತ‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲೇ ಇದ್ದ ಅವರ ಬೆಂಬಲಿಗರು ಇದ್ಯಾವುದರ ಪರಿವೇ ಇಲ್ಲದೇ, ಈ ಎಲ್ಲಾ ವಿದ್ಯಾಮಾನಗಳನ್ನ ಫೇಸ್ ಬುಕ್‌ ಲೈವ್ ಮಾಡಿದ್ದಾರೆ.‌ ಶಾಸಕರ‌ ಕೂಗಾಟ ಈಗ ಸಾಮಾಜಿಕ ಜಾಲತಾಣದಲ್ಲಿ‌ ನೆಟ್ಟಿಗರ‌‌ ಕೆಂಗಣ್ಣಿಗೆ‌ ಗುರಿಯಾಗುತ್ತಿದ್ದಂತೆ‌ ಆ ವಿಡಿಯೋ ಡಿಲೀಟ್‌ ಆಗಿದೆ.

Edited By : Somashekar
PublicNext

PublicNext

11/01/2025 02:02 pm

Cinque Terre

32.97 K

Cinque Terre

0

ಸಂಬಂಧಿತ ಸುದ್ದಿ