", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/405356-1736567955-ash.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ArunPrasadMandya" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಡ್ಯ : ಮಾಜಿ ಸಂಸದೆ ಸುಮಲತಾ ಅವರು ಬಳಸಿದ್ದ ಕಾರು ಹತ್ತಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂಬುದು ಸುಳ್ಳಿನ ಆರೋಪ. ನಾನು ಅವರ ಕಾರು, ಇವರ...Read more" } ", "keywords": "Mandya News, Karnataka Politics, Sumalatha Ambareesh, Chalavara Swamy, HD Kumaraswamy, Karnataka Congress, Political Controversy, Car Controversy, Indian Politics,Mandya,Politics", "url": "https://publicnext.com/article/nid/Mandya/Politics" }
ಮಂಡ್ಯ : ಮಾಜಿ ಸಂಸದೆ ಸುಮಲತಾ ಅವರು ಬಳಸಿದ್ದ ಕಾರು ಹತ್ತಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂಬುದು ಸುಳ್ಳಿನ ಆರೋಪ. ನಾನು ಅವರ ಕಾರು, ಇವರ ಕಾರು ಹತ್ತಲ್ಲ ಎಂದಿಲ್ಲ ಹಾಗಂತ ಎಲ್ಲಾದರೂ ಹೇಳಿದ್ದೇನೆಯೇ? ಚಿಲ್ಲರೆ ರಾಜಕಾರಣ ಮಾಡುವುದು ಬೇಡ ಎಂದು ಚಲುವರಾಯಸ್ವಾಮಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಟಾಂಗ್ ನೀಡಿದರು.
ನಾನು ಸುಮಲತಾ ಅವರ ಕಾರು ಹತ್ತಲ್ಲ ಎಂಬ ಮಾತನ್ನೇ ಹೇಳಿಲ್ಲ. ಹಾಗೆಂದು ಚಲುವರಾಯಸ್ವಾಮಿ ಯಾಕೆ ಹೇಳಿದ್ದಾರೋ ಗೊತ್ತಿಲ್ಲ. ಆ ಕಾರು ತೆಗೆದುಕೊಳ್ಳಲ್ಲ ಎಂದು ನಾನು ಪತ್ರ ಬರೆದಿದ್ದೀನಾ? ಸರಕಾರಿ ಕಾರು ನಮ್ಮಪ್ಪನ ಆಸ್ತಿನಾ? ನಾನು ಸಿಎಂ ಆಗಿದ್ದಾಗ ಸರಕಾರಿ ಕಾರು, ಡ್ರೈವರ್, ಸಂಬಳ ತಗೊಂಡಿಲ್ಲ. ಈ ವಿಚಾರವನ್ನು ಚಿಲ್ಲರೆ ರೀತಿ ರಾಜಕೀಯವಾಗಿ ಬೆರಸುವ ಅವಶ್ಯಕತೆ ಇಲ್ಲ. ನನಗೆ ಒಂದು ಕಾರು ಕೊಡಿ ಎಂದು ಕೇಳಿದೇನೆಯೇ ಹೊರತು ಸುಮಲತಾ ಅವರು ಬಳಸಿರುವ ಬಳಸಲ್ಲ ಎಂದು ಎಲ್ಲಾದರೂ ಹೇಳಿದ್ದೆನೆಯೇ?
ಇಂತಹ ಸಣ್ಣ ವಿಚಾರವನ್ನು ಚರ್ಚೆ ಮಾಡುವ ಸಂಸ್ಕೃತಿಯನ್ನು ಚಲುವರಾಯಸ್ವಾಮಿ ಬಿಡುವುದು ಒಳ್ಳೆಯದು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಬುದ್ದಿವಾದ ಹೇಳಿದರು.
PublicNext
11/01/2025 09:29 am