ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ: ಚಿರತೆ ದಾಳಿಯಿಂದ ಹಸುವಿಗೆ ಗಂಭೀರ ಗಾಯ

ಮಂಡ್ಯ: ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವೊಂದರ ಮೇಲೆ ಹಾಡಹಗಲೇ ಚಿರತೆಯೊಂದು ದಾಳಿ‌ ನಡೆಸಿ‌ ಗಂಭೀರವಾಗಿ ಗಾಯಗೊಳಿಸಿರುವ ಘಟನೆ‌ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕೊರಟಿಗೆರೆ ಗ್ರಾಮದಲ್ಲಿ ಜರುಗಿದೆ.

ಕೊರಟಿಕೆರೆ ಗ್ರಾಮದ ಪ್ರಭಾಕರ್ ಎಂಬುವರಿಗೆ ಸೇರಿದ ಐವತ್ತು ಸಾವಿರ ಬೆಲೆಬಾಳುವ ಹಸು ಮೇಲೆ ಚಿರತೆ ದಾಳಿ ಮಾಡಿದೆ. ಕೆಲ ದಿನಗಳಿಂದಷ್ಟೇ ಇದೇ ಪ್ರಭಾಕರ್‌ಗೆ ಸೇರಿದ ಸಾಕು‌ ನಾಯಿಯನ್ನು ಇದೇ ಚಿರತೆ ಕೊಂದು ಹಾಕಿತ್ತು. ಇದೀಗ ಹಸು ಮೇಲೆ ಚಿರತೆ ದಾಳಿ ಮಾಡಿದೆ. ಗಾಯಗೊಂಡ ಹಸುವಿಗೆ ಪಶು ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿದ್ದು, ಚಿರತೆ ದಾಳಿ ಹೆಚ್ಚಿದ್ದರೂ ಅರಣ್ಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿರುವುದಕ್ಕೆ ಪ್ರಭಾಕರ್ ಆಕ್ರೋಶ ವ್ಯಕ್ತಪಡಿಸಿದ್ದು, ಸೂಕ್ತ ಪರಿಹಾರಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ.

Edited By : Vinayak Patil
Kshetra Samachara

Kshetra Samachara

10/01/2025 01:08 pm

Cinque Terre

1.9 K

Cinque Terre

0