ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಶ್ವ ಸುಂದರಿ ಹರ್ನಾಜ್‌ಗೆ ಆ ಒಂದು ಸಮಸ್ಯೆ ಇದೆ !

ಚಂಡೀಗಢ: ವಿಶ್ವ ಸುಂದರಿ ಹರ್ನಾಜ್ ಸಂಧು ಒಂದು ಸತ್ಯವನ್ನ ಈಗ ರಿವೀಲ್ ಮಾಡಿದ್ದಾರೆ. ತಮ್ಮ ವೈಯುಕ್ತಿಕ ಜೀವನಕ್ಕೆ ಸಂಬಂಧಿಸಿದ ಸತ್ಯ ಇದಾಗಿದೆ. ಇದರ ಬಗ್ಗೆ ಹೇಳಿಕೊಳ್ಳಲು ಹರ್ಜಾನ್ ಭಯಪಟ್ಟುಕೊಂಡಿಲ್ಲ.ಆದರೆ, ಅವರ ಮಾತಿನಲ್ಲಿ ಬೇಸರ ಅಂತೂ ಇದ್ದೇ ಇತ್ತು.

ಹೌದು.ವಿಶ್ವ ಸುಂದರಿ ಹರ್ನಾಜ್ ಸಂಧುಗೆ ಉದರ ಕಾಯಿಲೆ ಇದೆ. ಇದನ್ನ ಇಂಗ್ಲೀಷ್ ನಲ್ಲಿ celiac disease ಅಂತಲೇ ಕರೆಯುತ್ತಾರೆ. ಇಂತಹ ರೋಗದಿಂದ ಬಳಲುತ್ತಿರೋ ಹರ್ನಾಜ್‌ ಅತಿ ಹೆಚ್ಚು ಗೋಧಿ ಹಿಟ್ಟಿನ ಆಹಾರವನ್ನ ಸೇವಸಲೇ ಬಾರದು. ಅಲ್ಲದೇ ಇನ್ನೂ ಕೆಲವು ಆಹಾರಗಳಿವೆ ಅದನ್ನು ಹರ್ನಾಜ್ ಸೇವಿಸೋ ಆಗಿಲ್ಲ.

ಹೀಗಂತ ಚಂಡೀಗಢ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹರ್ಜಾನ್ ಹೇಳಿಕೊಂಡಿದ್ದಾರೆ. ಈ ಒಂದು ಉದರ ಕಾಯಿಲೆಯಿಂದ ನನ್ನ ದೇಹದ ತೂದಲ್ಲಿ ಏರಿಳಿ ಆಗುತ್ತಿತ್ತು. ಆಗ ಜನ ನನ್ನ ಆಡಿಕೊಳ್ಳುತ್ತಿದ್ದರು.ಆದರೆ ನನ್ನ ಮನಸ್ಸು..ನನ್ನ ದೇಹ..ನಾನು ಹೇಗೆ ಬೇಕಾದರು ಇರಬಹುದು ಎಂದು ಕಾಮೆಂಟ್ ಮಾಡೋರಿಗೆ ಹರ್ನಾಜ್ ಟಾಂಗ್ ಕೊಟ್ಟಿದ್ದಾರೆ. ಇತರರಿಗೂ ಈಗ ಸ್ಪೂರ್ತಿ ಆಗಿದ್ದಾರೆ.

Edited By :
PublicNext

PublicNext

01/04/2022 12:18 pm

Cinque Terre

27.71 K

Cinque Terre

0