ಖಾಲಿ ಹೊಟ್ಟೆಯಲ್ಲಿ ದ್ರಾಕ್ಷಿ ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ. ದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು ಸೇವಿಸುವುದು ಉತ್ತಮ. ಕಪ್ಪು ದ್ರಾಕ್ಷಿಯಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಇದು ಚರ್ಮದ ಆರೋಗ್ಯಕ್ಕೆ ಉತ್ತಮ.
ಒಣದ್ರಾಕ್ಷಿಯನ್ನು ಖರೀದಿಸುವಾಗ ಕಪ್ಪು ದ್ರಾಕ್ಷಿಯನ್ನು ಆಯ್ಕೆ ಮಾಡಿ, ಏಕೆಂದರೆ ಕಪ್ಪು ಬಣ್ಣದ ದ್ರಾಕ್ಷಿಯಲ್ಲಿ ನ್ಯೂಟ್ರಿಷಿಯನ್ ಪ್ರಮಾಣ ಹೆಚ್ಚು. ಪೌಷ್ಟಿಕಾಂಶ ಮತ್ತು ವಿಟಮಿನ್ ಸಿ ಪ್ರಮಾಣವೂ ಅಧಿಕ. ಮುಖದ ಮೇಲೆ ಮೊಡವೆ ಮತ್ತು ಕಪ್ಪು ಕಲೆಗಳು, ಚರ್ಮ ಒಣಗುವ ಸಮಸ್ಯೆ ಇರುವವರಿಗೆ ಕಪ್ಪು ದ್ರಾಕ್ಷಿ ಸುಲಭವಾದ ಮನೆಮದ್ದು.
ಪ್ರತಿ ರಾತ್ರಿ 10-15 ದ್ರಾಕ್ಷಿ ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಹೀಗೆ ಮಾಡುವುದರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ. ಒಣ ದ್ರಾಕ್ಷಿಯಲ್ಲಿ ಹೆಚ್ಚಾಗಿ ಪ್ರೊಟೀನ್ ಕ್ಯಾಲ್ಸಿಯಂ, ಐರನ್, ವಿಟಮಿನ್ಸ್, ಮೆಗ್ನೀಷಿಯಮ್, ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಬ್ಯಾಕ್ಟೀರಿಯಾ ಗುಣಗಳು ಹೇರಳವಾಗಿದೆ.
PublicNext
23/09/2021 11:43 am