ಬೆಳ್ಳಿಯ ಉಂಗುರವನ್ನು ಕಿರುಬೆರಳಿಗೆ ಧರಿಸುವುದರಿಂದ ದೇಹಕ್ಕೆ ಸಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. ಆಭರಣಗಳ ರೂಪದಲ್ಲಿ ಪ್ರತಿಯೊಬ್ಬರೂ ಉಂಗುರ ಧರಿಸುವುದು ಇಂದು ಫ್ಯಾಶನ್ ಆಗಿದೆ. ಬೆಳ್ಳಿಗೆ ಮನುಷ್ಯನ ದೇಹದ ಕೋಪತಾಪಗಳನ್ನು ಕಡಿಮೆ ಮಾಡಿ ಶಾಂತತೆ ನೆಲೆಸುವ ಶಕ್ತಿ ಇದೆ. ಇದರಿಂದ ಕೀಲು ನೋವು, ಕೆಮ್ಮು, ಶೀತ ಕಫಗಳೂ ಕಡಿಮೆಯಾಗುತ್ತವೆ.
ಇಂದು ಫ್ಯಾಶನ್ ಲೋಕದಲ್ಲಿ ಬೆಳ್ಳಿಯ ಹಲವಾರು ವಿನ್ಯಾಸದ ಉಂಗುರಗಳಿವೆ. ಆಯಾ ನಕ್ಷತ್ರಕ್ಕೆ ಹೊಂದಿಕೆಯಾಗುವ ಕಲ್ಲುಗಳ ಉಂಗುರಗಳು ಬೆಳ್ಳಿಯ ಉಂಗುರವನ್ನು ತಮ್ಮ ಕಟ್ಟಿಸಿಕೊಳ್ಳುತ್ತಾರೆ. ಪ್ರೀತಿಪಾತ್ರರಿಗೆ ಉಡುಗೊರೆ ನೀಡುವಾಗಲೂ ಇದನ್ನೇ ಕೊಡುತ್ತಾರೆ.
ಸಂಗಾತಿಗಳ ನಡುವಿನ ಸಂಘರ್ಷವನ್ನೂ ನಿವಾರಿಸುವ ಶಕ್ತಿ ಈ ಬೆಳ್ಳಿಗಿದ್ದು ಪತಿ – ಪತ್ನಿಯರಿಬ್ಬರೂ ಬೆಳ್ಳಿಯ ಉಂಗುರವನ್ನು ಧರಿಸುವುದು ಒಳ್ಳೆಯದು ಎನ್ನುತ್ತದೆ ಶಾಸ್ತ್ರ.
PublicNext
09/08/2021 03:05 pm