ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

139Kg ತೂಕದ ಟಿಕ್‌ಟಾಕ್‌ ಯುವಕ ಪುವಿ; ಫ್ಯಾಟ್‌ ಆಗಿದ್ದಕ್ಕೆ ಕೈಕೊಟ್ಟ ಗರ್ಲ್‌ಫ್ರೆಂಡ್; ಹುಡುಗ ಮಾಡಿದ್ದೇನು ಗೊತ್ತಾ?

ಆತನು ಪುವಿ ಎಂಬಾತ ಟಿಕ್‌ಟಾಕ್‌ನ ಬಳಕೆದಾರ. ಹಲವಾರು ವಿಡಿಯೋ ಮತ್ತು ಚಿತ್ರಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ. ಜೊತೆಗೆ ಇನ್ಸ್ಟಾಗ್ರಾಮ್ ಹಾಗೂ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿದ್ದಾರೆ.. ಮೊದಲು ಮೊದಲು ತಮ್ಮ ವಿಡಿಯೋಗಳನ್ನು ವಿವಿಧ ಶೈಲಿಯಲ್ಲಿ ಹಾಡು ಡ್ಯಾನ್ಸ್‌ಗಳ ಮೂಲಕ ಅನೇಕ ಫಾಲವರ್ಸ್ನ ಬೆಳೆಸಿಕೊಂಡಿದ್ದಾರೆ..

ತಮ್ಮ ದೇಹದ ತೂಕ ಅತೀಯಾಗಿ ಹೆಚ್ಚಾಗಿದ್ದ ಕಾರಣ ತುಂಬಾ ನಿರಾಶರಾಗಿದ್ದರು.. ಈ ವಿಚಾರಕ್ಕೆ ತಮ್ಮ ಗೆಳತಿಯೊಂದಿಗೆ ಈ ಬಗ್ಗೆ ವಾದಗಳು ನಡೆಯುತ್ತಿದ್ವು.. ಆದ್ರೆ ಪುವಿಯ ಫ್ಯಾಟ್ನೆಸ್‌ ಬಗ್ಗೆ ಅವರ ಗರ್ಲ್‌ಫ್ರೆಂಡ್ ತುಂಬಾ ಕೋಪವಾಗಿದ್ದರು..ಅಲ್ಲದೇ ಇದೇ ವಿಚಾರಕ್ಕೆ ಒಂದು ದಿನ ನೀನು ತುಂಬಾ ಫ್ಯಾಟ್‌ ಆಗಿದ್ದೀಯಾ ಎಂದು ಸಡನ್‌ ಆಗಿ ದೂರ ತಳ್ಳಿದ್ದಾಳೆ. ತಮ್ಮ ಗೆಳತಿಯ ಪ್ರತಿಕ್ರಿಯೆಗೆ ಡಿಫ್ರೆಸೆನ್‌ನಿಂದ ಕೆಲದಿನ ಮಂಕಾಗಿದ್ದ ಪುವಿ, ಗೆಳತಿಗೆ ತಕ್ಕ ಉತ್ತರ ಕೊಡಲು ನಿರ್ಧರಿಸಿ, ಜೀವನಶೈಲಿಯನ್ನು ಬದಲಾಯಿಸಲು ಜಿಮ್‌ಗೆ ಹೋಗಲು ಶುರು ಮಾಡಿದರು.

ಒಂದೇ ವರ್ಷದಲ್ಲಿ 65Kg ತೂಕ ಇಳಿಸಿ 139Kg ಇದ್ದ ಪುವಿ 74Kg ಆಗಿದ್ದಾರೆ.. ಈ ಬದಲಾವಣೆ ಎಲ್ಲರಿಗೂ ಸ್ಫೂರ್ತಿ ನೀಡಿದೆ. ಈ ಪ್ರಯಾಣವು ಅವರನ್ನು ಆನ್‌ಲೈನ್‌ನಲ್ಲಿ ಸ್ಟಾರ್ ಆಗಿ ಮಾಡಿದೆ. ಸದ್ಯ ತಮ್ಮ ಪೋಟೋಸ್‌ನ್ನು ಇನ್ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್‌ ಮಾಡುವ ಮೂಲಕ ಖುಷಿ ವ್ಯಕ್ತಪಡಿಸಿದ್ದಾರೆ..

Edited By : Abhishek Kamoji
PublicNext

PublicNext

23/08/2022 07:07 pm

Cinque Terre

21.89 K

Cinque Terre

1