ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತೀಯ ಸಂಸ್ಕೃತಿಗೆ ಬರೆ : ಸೀರೆ ಉಟ್ಟ ನೀರೆಯರಿಗೆ ಈ ರೆಸ್ಟೋರೆಂಟ್ ನಲ್ಲಿ ನಿಷೇಧವಂತೆ

ನವದೆಹಲಿ: ಸೀರೆ ಎಂಬುದು ಭಾರತೀಯ ಸಂಪ್ರದಾಯದ ಪ್ರತೀಕ. ಆದರೆ ದೆಹಲಿಯ ರೆಸ್ಟೋರೆಂಟ್ ಒಂದರಲ್ಲಿ ಸೀರೆ ಉಟ್ಟವರಿಗೆ ಪ್ರವೇಶ ಇಲ್ಲವಂತೆ. ಹಾಗಾಂತ ರೆಸ್ಟೋರೆಂಟ್ ಸಿಬ್ಬಂದಿ ಹೇಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸೀರೆಯುಟ್ಟ ಮಹಿಳೆಯೊಬ್ಬರಿಗೆ ಆಧುನಿಕ ರೆಸ್ಟೋರೆಂಟ್‍ನಲ್ಲಿ ಪ್ರವೇಶ ನಿರಾಕರಿಸಲಾಗಿದೆ. ಇದನ್ನು ತಿಳಿಯದ ಪತ್ರಕರ್ತೆ ಅನಿತಾ ಚೌಧರಿ ಸೀರೆಯುಟ್ಟು ರೆಸ್ಟೋರೆಂಟ್ ಪ್ರವೇಶ ಮಾಡಿದ್ದಾರೆ. ಈ ವೇಳೆ ಅಲ್ಲಿನ ಸಿಬ್ಬಂದಿ "ಹೋಟೆಲ್‌ನಲ್ಲಿ ಸೀರೆ ತೊಟ್ಟವರಿಗೆ ಪ್ರವೇಶ ಇಲ್ಲ. ಸೀರೆಯನ್ನು ಸಾಮಾನ್ಯ ಉಡುಪು ಎಂದು ನಾವು ಪರಿಗಣಿಸುವುದಿಲ್ಲ. ಇಲ್ಲಿ ಏನಿದ್ದರೂ ಸ್ಮಾರ್ಟ್ ಕ್ಯಾಶುಯಲ್ ಉಡುಪಿಗೆ ಮಾತ್ರ ಅನುಮತಿ ನೀಡಲಾಗುವುದು" ಎಂದು ಪತ್ರಕರ್ತೆ ಅನಿತಾ ಚೌಧರಿ ಅವರನ್ನು ಹೊರಗೆ ಕಳುಹಿಸಿದ್ದಾರೆ.

ಈ ಕುರಿತು ಪತ್ರಕರ್ತೆ ಅನಿತಾ ಚೌಧರಿ ಅವರು ತಮಗಾದ ಅವಮಾನವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ಭಾರತೀಯ ಸೀರೆ ಸ್ಮಾರ್ಟ್ ಉಡುಗೆ ಅಲ್ಲ ಎಂಬ ಮಾತ್ರಕ್ಕೆ ತಮಗೆ ರೆಸ್ಟೋರೆಂಟ್‍ಗೆ ಅವಕಾಶ ನೀಡಲಿಲ್ಲ. ಈ ಸ್ಮಾರ್ಟ್ ಉಡುಗೆ ಎಂದರೆ ಏನು ತಿಳಿಸಿ. ಆಗ ನಾನು ಸೀರೆ ಧರಿಸುವುದನ್ನು ನಿಲ್ಲಿಸುತ್ತೇನೆ' ಎಂದಿದ್ದಾರೆ.

Edited By : Manjunath H D
PublicNext

PublicNext

23/09/2021 10:56 am

Cinque Terre

105.71 K

Cinque Terre

9