ಸದ್ಯ ಚಳಿಗಾಲ ಆರಂಭವಾಗಿದೆ. ಹೀಗಾಗಿ ಚಳಿಗಾಲ ಎದುರಿಸಲು ಜನ ಎಲ್ಲ ಮನೆಮದ್ದುಗಳೊಂದಿಗೆ ಸಿದ್ಧವಾಗಿರುತ್ತಾರೆ. ಚಳಿ, ಶುಷ್ಕ ಗಾಳಿ ನಿಮ್ಮ ತುಟಿ ಮತ್ತು ಚರ್ಮವನ್ನು ಶುಷ್ಕ ಮತ್ತು ಬಿಗಿಯಾಗಿಸುತ್ತದೆ. ನಿಮ್ಮ ತುಟಿ ಮತ್ತು ಮುಖ ಹಾಗೂ ಶರೀರದ ಇತರ ಭಾಗಗಳು ಶುಷ್ಕವಾಗುತ್ತವೆ. ಇದು ನಿಜಕ್ಕೂ ಸೂಕ್ಷ್ಮವಾಗಿದ್ದು ಪ್ರಚೋದಕಗಳಿಗೆ ಸುಲಭವಾಗಿ ಸ್ಪಂದಿಸುತ್ತದೆ. ವಾಸ್ತವದಲ್ಲಿ ಚಳಿಗಾಲದಲಿ ನೆಗಡಿ, ಗಂಟಲು ಉರಿ ಮತ್ತು ಕೆಮ್ಮಿನಂತಹ ಅನೇಕ ಖಾಯಿಲೆಗಳು ಬಾಧಿಸುತ್ತವೆ. ಶೀತ ಹವೆ ಒಡೆದ ತುಟಿ, ಒಣಗಿದ ಮೊಣಕೈ, ನೆಗಡಿ ಮತ್ತು ಕೆಮ್ಮಿನಂತಹ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಉಷ್ಣಾಂಶದಲ್ಲಿ ಕುಸಿತವನ್ನು ಜೇನುತುಪ್ಪದ ಗುಣಕಾರಕ ಲಕ್ಷಣಗಳಿಂದ ಸರಿಪಡಿಸಬಹುದಾಗಿದೆ.
ನೀವು ಒಂದು ಟೇಬಲ್ ಸ್ಪೂನ್ ಜೇನುತುಪ್ಪಕ್ಕೆ ಕೆಲವು ಹನಿ ಶುಂಠಿರಸ ಸೇರಿಸಬಹುದು. ಅವುಗಳನ್ನು ಮಿಶ್ರ ಮಾಡಿ ಇದನ್ನು ಮಲಗುವ ಮೊದಲು ಪ್ರತಿದಿನ ರಾತ್ರಿ ಕುಡಿಯಬೇಕು. ಇದು ಗಂಟಲಿನ ಸಮಸ್ಯೆಯನ್ನು ಗುಣಪಡಿಸಲು ಉಪಯುಕ್ತ ಪ್ರಾಕೃತಿಕ ಉಪಶಮನವಾಗಿದೆ.
ಹೆಚ್ಚಾಗಿ ಚಳಿಗಾಲದಲ್ಲಿ ಅನೇಕ ಜನ ಮೊಡವೆ ಮತ್ತು ಶುಷ್ಕತೆಯ ಸಮಸ್ಯೆ ಎದುರಿಸುತ್ತಾರೆ. ಇಂತಹ ಸಂದರ್ಭದಲ್ಲಿ, ಜೇನುತುಪ್ಪ ನಿಮ್ಮ ಮುಖದ ಮೇಲಿನ ಶುಷ್ಕತೆ ಮತ್ತು ಮೊಡವೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ. ನೀವು ಜೇನುತುಪ್ಪವನ್ನು ಮನೆಯಲ್ಲೇ ತಯಾರಿಸಿದ ಮಾಸ್ಕ್ ಮತ್ತು ಸ್ಕ್ರಬ್ ಆಗಿ ಬಳಸಬಹುದು. ಇದು ನಿಮ್ಮ ಚರ್ಮವನ್ನು ಹೊಳಪು ಮತ್ತು ಮೃದುವಾಗಿಡುತ್ತದೆ.
ಜೇನು ತುಪ್ಪವನ್ನು ನಿಮ್ಮ ತುಟಿಗೆ ಮಾಸ್ಕ್ ನಂತೆ ಹಚ್ಚಿ. ನೀವು ಇದರಿಂದ ಜೇನುತುಪ್ಪದ ತುಟಿಯ ಸ್ಕ್ರಬ್ ಆಗಿಯೂ ಬಳಸಬಹುದು. ಇದಕ್ಕೆ ತೆಂಗಿನೆಣ್ಣೆ, ವೆನಿಲಾ ಎಸೆನ್ಸ್ ಮತ್ತು ಜೇನುಹುಳದ ಮೇಣ ಸೇರಿಸಿ, ನಿಮ್ಮದೇ ಆದ ಲಿಪ್ ಬಾಮ್ ತಯಾರಿಸಬಹುದು.
ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದರೆ, ಜೇನುತುಪ್ಪವನ್ನು ನಿಮ್ಮ ಆಹಾರದಲ್ಲಿ ಸೇರಿಸಬೇಕು. ಇದು ನಿಮ್ಮ ಮನಸ್ಸು ಮತ್ತು ದೇಹಕ್ಕೆ ಶಾಂತಿ ಮತ್ತು ನೆಮ್ಮದಿ ನೀಡುತ್ತದೆ. ನೀವು ಬಿಸಿ ಹಾಲಿಗೆ ಸ್ವಲ್ಪ ಜೇನುತುಪ್ಪ ಬೆರೆಸಿ, ಮಲಗುವ ಮೊದಲು ಕುಡಿಯುವುದು ಪರಿಣಾಮಕಾರಿ. ಇವೆಲ್ಲವೂ ಚಳಿಗಾಲದಲ್ಲಿ ಜೇನುತುಪ್ಪದ ಪ್ರಮುಖ ಪ್ರಯೋಜನಗಳಾಗಿವೆ.
PublicNext
25/11/2020 02:11 pm