ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋವಿಡ್‌ನಿಂದ ಗುಣಮುಖರಾದವರು ಎಷ್ಟು ದಿನಗಳ ನಂತರ ಸೆಕ್ಸ್ ಮಾಡ್ಬಹುದು- ಏನು ಹೇಳುತ್ತೆ ಹೊಸ ಅಧ್ಯಯನ?

ನವದೆಹಲಿ: ವಿಶ್ವದಾದ್ಯಂತ ಕೊರೊನಾ ಸೋಂಕು ನಿಯಂತ್ರಣಕ್ಕೆ ಸಿಗುತ್ತಿಲ್ಲ. ಇತ್ತ ಸೋಂಕಿತ ವ್ಯಕ್ತಿ/ಮಹಿಳೆ ಸೆಕ್ಸ್ ಮಾಡಬಹುದೇ ಅಥವಾ ಬೇಡವೋ ಎನ್ನುವ ಬಗ್ಗೆ ಅನೇಕ ಅಧ್ಯಯನಗಳು ನಡೆದಿದೆ. ಅಷ್ಟೇ ಅಲ್ಲದೆ ಸೋಂಕಿನಿಂದ ಗುಣಮುಖರಾದ ಬಳಿಕ ಎಷ್ಟು ದಿನಗಳ ನಂತರ ಲೈಂಗಿಕ ಸಂಪರ್ಕ ಹೊಂದುವುದು ಉತ್ತಮ ಎನ್ನುವ ಬಗ್ಗೆಯೂ ವಿಜ್ಞಾನಿಗಳು ಅಧ್ಯಯನದ ವರದಿಯನ್ನು ಪ್ರಕಟಿಸಿದ್ದಾರೆ.

ಕೋವಿಡ್-19 ಸೋಂಕಿತ ವ್ಯಕ್ತಿಯ ವೀರ್ಯದ ಮೂಲಕ ವೈರಸ್ ವರ್ಗಾವಣೆ ಆಗುವುದಿಲ್ಲ. ಆದ್ರೆ ಸೆಕ್ಸ್ ವೇಳೆ ಕಿಸ್ ಮಾಡದೆ ಇದ್ದರೆ ಉತ್ತಮ. ಏಕೆಂದರೆ ಎಂಜಲಿನ ಮೂಲಕ ವೈರಸ್ ಹಸ್ತಾಂತರ ಆಗಬಹುದು ಎಂದು ಅಧ್ಯಯನವೊಂದು ಹೇಳಿದೆ

ಈ ಮಧ್ಯೆ ಹೊಸ ಅಧ್ಯಯನವೊಂದು ಅಚ್ಚರಿಯ ವಿಚಾರ ಹೇಳಿದೆ. ಕೊರೊನಾ ವೈರಸ್ ಕಾಣಿಸಿಕೊಂಡ ನಂತರದಲ್ಲಿ ಸೆಕ್ಸ್ ಮಾಡದೆ ಇರುವುದು ಉತ್ತಮ. ಸೋಂಕಿನಿಂದ ವೈರಸ್ ಕಾಣಿಸಿಕೊಂಡು ನೀವು ಗುಣಮುಖರಾದ ನಂತರ 30 ದಿನ ಸೆಕ್ಸ್ ಮಾಡದೆ ಇರುವುದೇ ಉತ್ತಮ ಎನ್ನಲಾಗಿದೆ.

ಈ ಅಧ್ಯಯನದ ತಂಡವು, ಕೊರೊನಾ ಸೋಂಕಿಕೆ ತುತ್ತಾದ 36 ಮಂದಿ ಪುರುಷರ ವೀರ್ಯವನ್ನು ಪರೀಕ್ಷೆ ಒಳಪಡಿಸಲಾಗಿತ್ತು. ಈ ವೇಳೆ ಶೇ.16 ಮಂದಿಯ ವೀರ್ಯದಲ್ಲಿ ಕೋವಿಡ್-19 ಪತ್ತೆಯಾಗಿದೆ. ವೈರಸ್ ನಿಂದ ಚೇತರಿಕೆ ಕಂಡಿದ್ದರೂ ಅದು ನಿಮ್ಮ ದೇಹದಲ್ಲಿ ಇರಬಹುದು. ಹೀಗಾಗಿ ಸೆಕ್ಸ್ ಮಾಡುವ ವೇಳೆ ಒಂದೊಮ್ಮೆ ಅದು ಮಹಿಳೆಯ ದೇಹ ಸೇರಿದರೆ ಅವಳಿಗೆ ಕೊರೋನಾ ಬರುವುದಲ್ಲದೆ, ಹುಟ್ಟುವ ಮಕ್ಕಳ ಮೇಲೂ ಸಮಸ್ಯೆ ಆಗಬಹುದು. ಹೀಗಾಗಿ ಕೊರೊನಾದಿಂದ ಚೇತರಿಸಿಕೊಂಡ 30 ದಿನಗಳ ಬಳಿಕ ಸೆಕ್ಸ್ ಮಾಡುವುದು ಉತ್ತಮ ಎಂದು ತಿಳಿಸಿದೆ.

Edited By : Vijay Kumar
PublicNext

PublicNext

29/09/2020 07:27 pm

Cinque Terre

80.36 K

Cinque Terre

0