ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆರಿಕನ್ನರ ಮನಗೆದ್ದ ದಕ್ಷಿಣ ಭಾರತದ ರಸಂ:ಇದರಲ್ಲಿ ಇಮ್ಯುನಿಟಿ ಇದೆಯಂತೆ

ವಾಷಿಂಗ್ಟನ್: ವಿಶ್ವವೇ ಕೊರೊನಾ ಲಸಿಕೆ ಯಾವಾಗ ಸಿಗುತ್ತೆ ಎಂದು ಹಾತೊರೆಯುತ್ತಿದೆ. ಆದ್ರೆ ಇತ್ತ ಅಮೆರಿಕನ್ನರು ದಕ್ಷಿಣ ಭಾರತದ ಅಡುಗೆ ರಸಂಗೆ ಮನ ಸೋತಿದ್ದಾರೆ.

ಹೌದು. ಭಾರತದ ರಸಂಗೆ ಅಮೆರಿಕದಲ್ಲಿ ಭಾರಿ ಪ್ರಮಾಣದಲ್ಲಿ ದಿಢೀರ್ ಬೇಡಿಕೆ ಉಂಟಾಗಿದೆ. ರಸಂನಿಂದ ರೋಗ ಇಮ್ಯೂನಿಟಿ ಪವರ್(ರೋಗ ನಿರೋಧಕ ಶಕ್ತಿ) ಹೆಚ್ಚಾಗುತ್ತದೆ ಎಂದು ತಿಳಿದು ಅಮೆರಿಕದ ಮಂದಿ ಈಗ ಮನೆಗೆ ರಸಂ ಪ್ಯಾಕೆಟ್‍ಗಳನ್ನು ತರಿಸಿಕೊಳ್ಳುತ್ತಿದ್ದಾರೆ.

ಅಮೆರಿಕನ್ನರು ಈ ರೀತಿ ಮನಸೋಲಲು ಕಾರಣ ಬಾಣಸಿಗ ಅರುಣ್ ರಾಜದುರೈ ಅವರು ತಯಾರಿಸಿದ ರಸಂ. ಲಾಕ್‍ಡೌನ್ ಸಮಯದಲ್ಲಿ ಮನೆಯಲ್ಲಿ ಕುಳಿತಿದ್ದಾಗ ತಮಿಳುನಾಡು ಮೂಲದ ಬಾಣಸಿಗ 35 ವರ್ಷದ ಅರುಣ್ ರಾಜದುರೈ ಅವರಿಗೆ ಹೀಗೊಂದು ವಿಭಿನ್ನವಾದ ಯೋಚನೆ ಬರುತ್ತದೆ.

ಅರಿಶಿಣ, ಬೆಳ್ಳುಳ್ಳಿ, ಶುಂಠಿ ಇವುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಇದೆ ಎಂದು ತಿಳಿದಿದ್ದ ಅರುಣ್ ಯಾಕೆ ರಸಂ ಮಾಡಿ ಕೊರೊನಾ ರೋಗಿಗಳಿಗೆ ನೀಡಬಾರದು ಎಂಬ ಅಲೋಚನೆ ಬಂದಿದೆ.

ಆಲೋಚನೆ ಸಾಕಾರಗೊಳಿಸಲು ಶೆಫ್ ಅರುಣ್ ಕೊರೊನಾ ರೋಗಿಗಳಿರುವ ಮೂರು ಆಸ್ಪತ್ರೆಗಳಿಗೆ ಊಟವನ್ನು ನೀಡುತ್ತಿದ್ದರು. ಆಗ ರಸಂ ಅನ್ನು ಜನ ಕಾಂಪ್ಲಿಮೆಂಟರಿ ಡಿಶ್ ಆಗಿ ಸೇರಿಸಿಕೊಂಡರು. ಅರುಣ್ ತಯಾರಿಸಿದ ರಸಂ ರುಚಿ ನೋಡಿದ ರೋಗಿಗಳು ಉತ್ತಮ ಪ್ರತಿಕ್ರಿಯೆಯನ್ನು ನೀಡಿದ್ದು ಮಾತ್ರವಲ್ಲದೆ ದಿನದಿಂದ ದಿನಕ್ಕೆ ರಸಂ ಬೇಡಿಕೆ ಹೆಚ್ಚಾಗುತ್ತಾ ಹೋಗುತ್ತದೆ.

ನ್ಯೂಯಾರ್ಕ್, ನ್ಯೂಜೆರ್ಸಿ, ಕೆನಡಾಗಳಲ್ಲಿ ರಸಂ ಸಿಕ್ಕಾ ಪಟ್ಟೆ ಫೇಮಸ್ ಆಯ್ತು. ಇದೀಗ ದಿನಕ್ಕೆ 500 ರಿಂದ 600 ಕಪ್ ರಸಂ ಮಾರಾಟವಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅರುಣ್, ನಾನು ಮನೆಯಲ್ಲಿದ್ದಾಗ ಪ್ರಯೋಗ ಮಾಡಿದೆ. ಕೊರೊನಾ ರೋಗಿಗಳಿಗೆ ರಸಂ ಕೊಡುವ ಯೋಚನೆ ಮಾಡಿದೆ. ಅಡುಗೆಯಲ್ಲಿ ಈ ಡಿಶ್ ಸೇರಿಸಿಕೊಂಡೆ. ಆದರೆ ಇಷ್ಟೊಂದು ಉತ್ತಮ ಸ್ಪಂದನೆ ಸಿಗುತ್ತದೆ ಎಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

07/12/2020 07:57 pm

Cinque Terre

96.26 K

Cinque Terre

1