ಮನುಷ್ಯನ ನಿತ್ಯದ ಚಟುವಟಿಕೆಗಳಲ್ಲಿ ಹಸಿವು ಮನುಷ್ಯನ ಅಗತ್ಯತೆ ಪ್ರಮುಖ ಅಂಶವಾದ್ರೇ ಆಹಾರ ಆ ಹಸಿವನ್ನು ಪೂರೈಸುವ ಇಂಧನ ಇವೆರೆಡು ಸರಿಯಾಗಿದ್ದರೆ ಮಾತ್ರ ಜೀವನ ಸಮತೋಲನ ಅಲ್ವೇ ಅಂತಹ ಹಸಿವಿನ್ನ ತೃಪ್ತಿಪಡಿಸುವ ವಿಶ್ವ ಆಹಾರದ ದಿನಾಚರಣೆ ಇಂದು.
ಮುಖ್ಯವಾಗಿ ಈ ಆಹಾರದ ದಿನಾಚರಣೆ ಸಂದರ್ಭ ರೈತನಿಲ್ಲಿದೆ ಬಾಳಿಲ್ಲ ಎಂಬ ಅರಿವು ನಮಗಾಗ ಬೇಕಿರುವುದು ಮಹತ್ವದ ಅಂಶವಾದ್ರೇ ಈ ಆಹಾರವನ್ನು ಅಷ್ಟೇ ಪ್ರಮುಖವಾಗಿ ಹಾಳಾಗದಂತೆ, ವ್ಯರ್ಥ ಮಾಡಿದಂತೆಯೇ ಸೇವಿಸಬೇಕಾಗಿರುವುದು ಇನ್ನೊಂದು ಧರ್ಮವಾಗಿದೆ.
ಆಧುನಿಕ ಶೈಲಿ ಹೆಚ್ಚಿದಂತೆ ಆಹಾರ ಕ್ರಮದಲ್ಲಿ ವಿಪರೀತ ಬದಲಾವಣೆಗಳಾದರೂ ಅದರ ಮೂಲ ಬೇರು ರೈತನೇ ಹೀಗಾಗಿ ಆ ಶ್ರಮದ ಹಿಂದಿರುವ ಬೆವರು ಹನಿಯ ಅರಿವು ಅರಿತು ನಿತ್ಯದ ಆಹಾರ ಕ್ರಮದಲ್ಲಿ ಬೇಕಾದಷ್ಟೇ ಬಳಕೆ ಮಾಡಿ ಉಳಿದರೇ ಇತರರ ಹಸಿವನ್ನು ನೀಗಿಸುವ ಕಾರ್ಯ ಆರಂಭವಾಗಬೇಕಿದ್ದು ಪೌಷ್ಟಿಕ ಆಹಾರ ಸೇವನೆಯೂ ಬಹುಮುಖ್ಯವಾಗಿದೆ.
ಸದ್ಯ ಭಾರತ ದೇಶದ ಬೆನ್ನೆಲುಬು ರೈತನೇ ಆಗಿದ್ದು ಆತ ಬೆಳೆದ ಬೆಳೆ ಅವನ ಕೈಗೆ ದಕ್ಕುವುದೇ ಅನುಮಾನವಾದ ಪ್ರಸಕ್ತ ಅತಿವೃಷ್ಟಿ ದಿನಗಳಲ್ಲಿ ಆಹಾರವನ್ನು ಹಾಳಾಗದಂತೆ ಎಚ್ಚರ ವಹಿಸಿ ಕ್ರಮಬದ್ಧವಾದ ಜೀವನ ಶೈಲಿಗೆ ಕ್ರಮಬದ್ಧವಾದ ಆಹಾರ ಸೇವನೆ ಪಡೆದು ಅನ್ನ ನೀಡಿದ ರೈತ ಪ್ರಕೃತಿ, ಭೂತಾಯಿ ಪಂಚಭೂತಗಳ ಸ್ಮರಣೆ ನಮ್ಮದಾಗಬೇಕಿದೆ ಅಂದಹಾಗೇ 1945 ರಿಂದ ವಿಶ್ವ ಆಹಾರ ದಿನಾಚರಣೆ ಆಚರಿಸುತ್ತಿದ್ದು ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಪ್ರತಿಯೊಬ್ಬರೂ ಆಹಾರ ಪಡೆದುಕೊಳ್ಳಬೇಕಿರುವುದು ಒಂದು ಹಕ್ಕಾಗಿದೆ.
PublicNext
16/10/2020 03:00 pm