ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕ್ಯಾಟ್‌ವಾಕ್ ಮಾಡ್ಬೇಕಿದ್ದ ಹುಡುಗಿ ಕಾಲು ಕಿತ್ತುಕೊಂಡ ಕೋವಿಡ್

ಪ್ಲೋರಿಡಾ:ಕೋವಿಡ್ ಎಲ್ಲರ ಜೀವನದಲ್ಲೂ ಆಟ ಆಡಿದೆ. ಕೆಲವರ ಜೀವನ ನಿಜಕ್ಕೂ ದುಸ್ತರ ಆಗಿದೆ. ಅದಕ್ಕೂ ಕೆಟ್ಟ ಅನಿಸೋದು ಯುವ ಮಾಡೆಲ್ ಒಬ್ಬಳ ಕಥೆ. ಕ್ಯಾಟ್ ವಾಕ್ ಮಾಡಬೇಕಿದ್ದ ಈ ರೂಪದರ್ಶಿಯ ಜೀವನದಲ್ಲಿ ಕೋವಿಡ್ ಎಂದೂ ಸರಿಯೋಗದಂತಹ ಒಂದು ಪೆಟ್ಟು ಕೊಟ್ಟು ಬಿಟ್ಟಿದೆ.

ಹೌದು. ಪ್ಲೋರಿಡಾದ 20 ವರ್ಷದ ಮಾಡೆಲ್ ಕ್ಲೇರ್ ಬ್ರಿಡ್ಜಸ್ ತನ್ನ ಎರಡೂ ಕಾಲುಗಳನ್ನ ಕಳೆದು ಕೊಂಡಿದ್ದಾಳೆ. ಕೋವಿಡ್ ಸೋಂಕು ತಗುಲಿದ ಮೇಲೆ ಈ ರೂಪದರ್ಶಿಗೆ ಹಲವು ಸಮಸ್ಯೆಗಳು ಕಾಡುತ್ತಲೇ ಇವೆ. ಅದರಿಂದ ಸ್ನಾಯು ಹಾನಿ ಕೂಡ ಆಗಿವೆ.

ಇದರ ಪರಿಣಾಮವೇ ಈಗ ಪ್ಲೋರಿಡಾ ತನ್ನ ಎರಡೂ ಕಾಲುಗಳನ್ನ ಕಳೆದುಕೊಂಡಿದ್ದಾಳೆ. ಈ ಸುಂದರಿಗೆ ಜನ್ಮದಿಂದಲೂ ಹೃದಯ ಸಂಬಂಧಿ ಕಾಯಿಲೆ ಕೂಡ ಇದೆ. ಆದರೆ ಕೋವಿಡ್ ಈಕೆಯ ಕಾಲುಗಳನ್ನೆ ಕೆಸಿದುಕೊಂಡು ಬಿಟ್ಟಿದೆ. ಜನವರಿ 16 ರಂದು ರೂಪದರ್ಶಿ ಕ್ಲೇರ್ ಆಸ್ಪತ್ರೆಗೆ ದಾಖಲಾಗಿದ್ದಳು. ಈಗ ಆಸ್ಪತ್ರೆಯಿಂದ ಮನೆಗೂ ಬಂದಿದ್ದಾಳೆ.

Edited By :
PublicNext

PublicNext

25/03/2022 10:13 am

Cinque Terre

41.64 K

Cinque Terre

0