ಮುಂಬೈ: ಕೊರೊನಾ ಭೀತ ಕಡಿಮೆಯಾದ ನಂತರ ಶಿರಡಿ ಸಾಯಿ ಬಾಬಾ ದೇವಸ್ಥಾನ ತೆರೆಯಲಾಗಿದೆ. ಸದ್ಯ ಸಾಯಿಬಾಬಾ ದರ್ಶನಕ್ಕೆ ಭಕ್ತಸಾಗರವೇ ಹರಿದುಬರುತ್ತಿದೆ. ಮಂಗಳವಾರದವರೆಗೆ ಸುಮಾರು 1 ಲಕ್ಷಕ್ಕೂ ಹೆಚ್ಚು ಭಕ್ತರು ಬಾಬಾ ದರ್ಶನ ಪಡೆದಿದ್ದಾರೆ.
ವಿಶ್ವದಾದ್ಯಂತ ಭಕ್ತರು 3.09 ಕೋಟಿ ರೂ., 2,85,629 ರೂ. ಮೌಲ್ಯದ 64 ಗ್ರಾಂ ಚಿನ್ನದ ಜೊತೆಗೆ 93,000 ರೂ. ಮೌಲ್ಯದ 2.8 ಕೆ.ಜಿ ಬೆಳ್ಳಿಯನ್ನು ದಾನ ಮಾಡಿದ್ದಾರೆ.
ಆನ್‍ಲೈನ್ ಮೂಲಕ ದೇವರ ದರ್ಶನಕ್ಕೆ ಬುಕ್ ಮಾಡಲಾಗುತ್ತಿದೆ. ನವೆಂಬರ್ 16 ಸೋಮವಾರದಿಂದ ರಾಜ್ಯದ ಎಲ್ಲಾ ದೇವಾಲಯಗಳು ಹಾಗೂ ಪೂಜಾ ಸ್ಥಳಗಳನ್ನು ಮತ್ತೆ ತೆರೆಯಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿತ್ತು.
PublicNext
26/11/2020 10:50 am