ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಖಾನ್ ಎಂಬ ಹೆಸರು ತೆಗೆದಿದ್ದೆ ಐಎಎಸ್ ಟಾಪರ್ಸ್ ದಂಪತಿಗಳ ಡೈವೋರ್ಸ್ ಗೆ ಕಾರಣವಾಯ್ತಾ ?

ಐಎಎಸ್ ಟಾಪರ್ಸ್ ದಂಪತಿ ಟೀನಾ ಮತ್ತು ಅಥರ್ ಖಾನ್ ಶುಕ್ರವಾರ ಜೈಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಕಳೆದ 2015ರ ಬ್ಯಾಚ್ ನ ಐಎಎಸ್ ಪರೀಕ್ಷೆಯ ತರಬೇತಿ ಸಮಯದಲ್ಲಿ ಟೀನಾ ಡಾಬಿ ಹಾಗೂ ಅಥರ್ ಖಾನ್ ನಡುವೆ ಪ್ರೇಮಾಂಕುರವಾಗಿ ಇಬ್ಬರೂ 2018ರಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದ್ದರು.

ಆದರೆ ಶುಕ್ರವಾರದ ಪರಸ್ಪರರು ಒಪ್ಪಿಗೆಯ ಮೇರೆಗೆ ಜೈಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ನಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದು ತಿಳಿದು ಬಂದಿದೆ. ಟೀನಾ ತಮ್ಮ ಸಾಮಾಜಿಕ ಜಾಲತಾಣದ ತಮ್ಮ ಹೆಸರಿನ ಮುಂದೆ ಇದ್ದ ಖಾನ್ ಎಂಬ ಸರ್ ನೇಮ್ ತೆಗೆದು ಹಾಕಿದಾಗ ಈ ಹಿಂದೆ ಇಬ್ಬರು ದಾಂಪತ್ಯ ಜೀವನದ ಕುರಿತು ಸುದ್ದಿಯಾಗಿತ್ತು. ಈ ಹಿಂದೆ ಈ ಜೋಡಿ ಮದುವೆ ಬಗ್ಗೆ ಬಿಜೆಪಿ ಲವ್ ಜಿಹಾದ್ ಆರೋಪ ಮಾಡಿತ್ತು.

ಆದರೆ ಇದೀಗ ಇದು ಅಂತರ್ಜಾತಿ ವಿವಾಹವಾಗಿದ್ದು ಖಾನ್ ಎಂಬ ಹೆಸರನ್ನು ಪತ್ನಿ ಟೀನಾ ತೆಗೆದು ಹಾಕಿದ್ದೇ ಡೈವೋರ್ಸ್ ಗೆ ಮೂಲ ಕಾರಣವಾಯ್ತು ಎಂದು ಹೇಳಲಾಗುತ್ತಿದೆ. 2015ರ ಐಎಎಸ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪತ್ನಿ ಟೀನಾ ಪಡೆದಿದ್ದರೆ ದ್ವೀತಿಯ ಸ್ಥಾನವನ್ನು ಪತಿ ಅಥರ್ ಖಾನ್ ಪಡೆದಿದ್ದರು.

Edited By : Manjunath H D
PublicNext

PublicNext

21/11/2020 07:26 am

Cinque Terre

43.62 K

Cinque Terre

3