ದೇಹದ ತೂಕ ಇಳಿಸಲು ಕೆಲವರು ವ್ಯಾಯಾಮ, ಯೋಗ, ಜಿಮ್ ಮಾಡುತ್ತಾರೆ. ಇದರೊಂದಿಗೆ ಆಹಾರ ಪಥ್ಯವನ್ನು ಮಾಡುವುದು ಕೂಡ ಅಗತ್ಯವಾಗಿದೆ. ಅಧ್ಯಯನವೊಂದರ ಪ್ರಕಾರ ರಾತ್ರಿ ವೇಳೆ ಬೇಳೆಸಾರು (ದಾಲ್) ಮತ್ತು ಅನ್ನ ತಿಂದರೆ ಅದರಿಂದ ನಿಮ್ಮ ತೂಕ ಇಳಿಸುವ ಶ್ರಮಕ್ಕೆ ನೆರವಾಗುವುದು.
ವಾರದಲ್ಲಿ ನಾಲ್ಕು ಬಾರಿ ನೀವು ರಾತ್ರಿ ಊಟಕ್ಕೆ ಬೇಳೆಸಾರು ಮತ್ತು ಅನ್ನ ಸೇವನೆ ಮಾಡಿದರೆ ಅದರಿಂದ ಜೀರ್ಣಕ್ರಿಯೆಯು ಸರಾಗವಾಗುವುದು. ಅಷ್ಟೇ ಅಲ್ಲದೆ ದಿನವಿಡಿ ನಿಮಗೆ ಬೇಕಾಗಿರುವ ಶಕ್ತಿಯು ಸಿಗುತ್ತದೆ. ತೂಕ ಇಳಿಸಲು ಇದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ.
ಬೇಳೆಸಾರಿನಲ್ಲಿ ಪ್ರಮುಖ ಪೋಷಕಾಂಶಗಳಾಗಿರುವ ಪ್ರೋಟೀನ್, ವಿಟಮಿನ್, ಕಬ್ಬಿನಾಂಶ, ಕ್ಯಾಲ್ಸಿಯಂ, ಕಾರ್ಬ್ಸ್ ಮತ್ತು ನಾರಿನಾಂಶವು ಇದೆ. ಅನ್ನದಲ್ಲಿ ಪ್ರೋಟೀನ್ ಅಧಿಕವಾಗಿದ್ದು, ಕಡಿಮೆ ಕಾರ್ಬ್ಸ್ ಇರುತ್ತದೆ. ಹೀಗಾಗಿ ತೂಕ ಇಳಿಕೆಗೆ ತುಂಬಾ ಸಹಕಾರಿ ಮತ್ತು ಆರೋಗ್ಯಕ್ಕೂ ಯಾವುದೇ ತೊಂದರೆ ಆಗುವುದಿಲ್ಲ. ವಾರದಲ್ಲಿ ನಾಲ್ಕು ಸಲ ನೀವು ಬೇಳೆಸಾರು ಮತ್ತು ಅನ್ನ ಸೇವನೆ ಮಾಡಿದರೆ, ತೂಕ ಇಳಿಕೆಗೆ ಮತ್ತಷ್ಟು ಬಲ ಸಿಗುತ್ತದೆ.
PublicNext
22/10/2020 05:21 pm