ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಪ್ರೀಂನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಲಿರುವ ನ್ಯಾ. ಡಿವೈ ಚಂದ್ರಚೂಡ್ ಬಗ್ಗೆ ನಿಮಗೆಷ್ಟು ಗೊತ್ತು?

ನವದೆಹಲಿ: ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಗಳಾಗಿ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರನ್ನು ಹಾಲಿ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಅವರು ಶಿಫಾರಸ್ಸು ಮಾಡಿದ್ದಾರೆ.ಹೌದು ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರನ್ನು ಸುಪ್ರೀಂಕೋರ್ಟ್ನ ನೂತನ ಮುಖ್ಯ ನ್ಯಾಯಮೂರ್ತಿಯಾನ್ನಾಗಿ ಶಿಫಾರಸು ಮಾಡಲಾಗಿದೆ.

ಸಿಜೆಐ ಉದಯ್ ಉಮೇಶ್ ಲಲಿತ್ ಅವರು ತಮ್ಮ ಉತ್ತರಾಧಿಕಾರಿ ಹೆಸರಿನಲ್ಲಿ ಸರ್ಕಾರಕ್ಕೆ ಪತ್ರ ಕಳುಹಿಸಿದ್ದಾರೆ.

ಈ ಹಿಂದೆ ಕಾನೂನು ಮತ್ತು ನ್ಯಾಯ ಸಚಿವಾಲಯವು ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರಿಗೆ ಪತ್ರ ಬರೆದು ಹೊಸ ಸಿಜೆಐ ಹೆಸರನ್ನು ಶಿಫಾರಸು ಮಾಡಿ ನೇಮಕಾತಿಗೆ ಸಂಬಂಧಿಸಿದ ಜ್ಞಾಪಕ ಪತ್ರ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಮನವಿ ಮಾಡಿತ್ತು ಎಂಬುವುದು ಉಲ್ಲೇಖನೀಯ.

ಚಂದ್ರಚೂಡ್ ಅವರು ನವದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜ್ ನಿಂದ ಅರ್ಥಶಾಸ್ತ್ರದಲ್ಲಿ ಬಿ.ಎ. ಆನರ್ಸ್, ದೆಹಲಿ ವಿಶ್ವವಿದ್ಯಾಲಯದ ಕ್ಯಾಂಪಸ್ ಲಾ ಸೆಂಟರ್ ನಿಂದ ಎಲ್.ಎಲ್.ಬಿ. ಪದವಿ ಮತ್ತು ಯು.ಎಸ್.ಎ.ಯ ಹಾರ್ವರ್ಡ್ ಲಾ ಸ್ಕೂಲ್ ನಿಂದ ಎಲ್.ಎಲ್.ಎಂ. ಮತ್ತು ಎಸ್.ಜೆ.ಡಿ. ಪದವಿ, ಬಾರ್ ಕೌನ್ಸಿಲ್ ಆಫ್ ಮಹಾರಾಷ್ಟ್ರದಲ್ಲಿ ನೋಂದಣಿ ಮತ್ತು ಮುಖ್ಯವಾಗಿ ಬಾಂಬೆ ಉಚ್ಛ ನ್ಯಾಯಾಲಯದಲ್ಲಿ ಮತ್ತು ಭಾರತದ ಸವೋಚ್ಛ ನ್ಯಾಯಾಲಯದಲ್ಲಿ ವಕೀಲ ವೃತ್ತಿ.

1998ರಲ್ಲಿ ಭಾರತದ ಹಿರಿಯ ವಕೀಲ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನಿಯೋಜನೆ.

-ಮಾರ್ಚ್ 29, 2000 ರಂದು ಬಾಂಬೆ ಉ.ನ್ಯಾಯಾಲಯದ ಪೀಠಕ್ಕೆ ಬಡ್ತಿ ಮಹಾರಾಷ್ಟ್ರ ನ್ಯಾಯಾಂಗ ಅಕಾಡೆಮಿಯ ನಿರ್ದೇಶಕರು.

– ಅಕ್ಟೋಬರ್ 31, 2013 ರಿಂದ ಅಲಹಾಬಾದ್ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕಾರ.

– ಮೇ 13, 2016 ರಂದು ಭಾರತದ ಸವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ಬಡ್ತಿ.

-ಮುಂಬೈ ವಿಶ್ವವಿದ್ಯಾಲಯದಲ್ಲಿ ತುಲನಾತ್ಮಕ ಸಾಂವಿಧಾನಿಕ ಕಾನೂನು ವಿಷಯಕ್ಕೆ ಸಂರ್ದಶನ ಪ್ರಾಧ್ಯಾಪಕ. ಯು.ಎಸ್.ಎ.ನ ಓಕ್ಲಹೋಮಾ ಯೂನಿವರ್ಸಿಟಿ ಸ್ಕೂಲ್ ಆಫ್ ಲಾನಲ್ಲಿ ಸಂದರ್ಶನ ಪ್ರಾಧ್ಯಾಪಕ.

– ಆಸ್ಟ್ರೇಲಿಯಾದ ರಾಷ್ಟ್ರೀಯ ವಿಶ್ವವಿದ್ಯಾಲಯ, ಹಾರ್ವರ್ಡ್ ಲಾ ಸ್ಕೂಲ್, ಯೇಲ್ ಲಾ ಸ್ಕೂಲ್ ಮತ್ತು ದಕ್ಷಿಣ ಆಫ್ರಿಕಾದ ವಿಟ್ವಾಟರಸ್ರ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಿಕೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಉನ್ನತ ಆಯೋಗ, ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ, ವಿಶ್ವ ಬ್ಯಾಂಕ್ ಮತ್ತು ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಸೇರಿದಂತೆ ವಿಶ್ವಸಂಸ್ಥೆಯ ಸಂಸ್ಥೆಗಳು ಆಯೋಜಿಸಿರುವ ಸಮ್ಮೇಳನಗಳಲ್ಲಿ ಭಾಷಣಕಾರ.

ನ್ಯಾಯಮೂರ್ತಿ ಚಂದ್ರಚೂಡ್ ಅವರು 50ನೇ ಸಿಜೆಐ ಆಗಲಿದ್ದು, ಅವರ ಅಧಿಕಾರಾವಧಿ ಎರಡು ವರ್ಷಗಳವರೆಗೆ ಇರುತ್ತದೆ. ಅವರು 10 ನವೆಂಬರ್ 2024 ರಂದು ನಿವೃತ್ತರಾಗಲಿದ್ದಾರೆ.

Edited By : Nirmala Aralikatti
PublicNext

PublicNext

12/10/2022 03:19 pm

Cinque Terre

44.08 K

Cinque Terre

0

ಸಂಬಂಧಿತ ಸುದ್ದಿ